Monday, August 31, 2026
spot_imgspot_img
spot_imgspot_img

ಸ್ಯಾಂಡಲ್​ವುಡ್ ನ ​​ಹಿರಿಯ ನಟ ಅಶ್ವತ್ಥ್​ ನಾರಾಯಣ ನಿಧನ

- Advertisement -
- Advertisement -

ಬೆಂಗಳೂರು: ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಸ್ಯಾಂಡಲ್​ವುಡ್​ನ ಹಿರಿಯ ನಟ, ಅಶ್ವತ್ಥ್​ ನಾರಾಯಣ ಇಂದು ಮಧ್ಯಾಹ್ನ ನಿಧನರಾಗಿದ್ದಾರೆ.

ಕೆಲವು ತಿಂಗಳುಗಳ ಹಿಂದೆ ಹಿರಿಯ ನಟ ಅಶ್ವತ್ಥ್​ ನಾರಾಯಣ ಸ್ವಂತ ಮಕ್ಕಳಿಂದಲೇ ದಬ್ಬಾಳಿಕೆಗೆ ಒಳಗಾಗಿದ್ದರು. ಊಟ , ಆಶ್ರಯ ನೀಡದೇ ಮಕ್ಕಳು ತೊಂದರೆ ಕೊಡುತ್ತಿದ್ದಾರೆ, ಅಷ್ಟೇ ಅಲ್ಲದೆ ತನ್ನನ್ನು ಮನೆಯಿಂದ ಹೊರಹಾಕಿದ್ದಾರೆ ಎಂದು ಆರೋಪಿಸಿ ಅವರು ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದರು.

vtv vitla
vtv vitla

ಹಲವಾರು ಪೌರಾಣಿಕ, ಭಕ್ತಿ ಪ್ರಧಾನ ಚಿತ್ರಗಳಲ್ಲಿ ನಟಿಸಿದ್ದ ಅವರು ಡಾ. ರಾಜಕುಮಾರ್​ ಹಾಗೂ ಅವರ ತಂದೆ ಪುಟ್ಟಸ್ವಾಮಿ ಅವರ ಜೊತೆಗೆ ಹಲವು ಚಿತ್ರಗಳಲ್ಲಿ ನಟಿಸಿ, ಚಿತ್ರರಂಗದಲ್ಲಿ ತಮ್ಮದೆಯಾದ ಛಾಪು ಮೂಡಿಸಿದ್ದರು. ಇಲ್ಲಿಯವರೆಗೂ ಸುಮಾರು 300 ಚಿತ್ರಗಳಲ್ಲಿ ನಟಿಸಿದ ಅವರು ಶಂಕರ್​ ನಾಗ್​, ಅನಂತ್​ ನಾಗ್​, ವಿಷ್ಣುವರ್ಧನ್​, ಅಂಬರೀಶ್​, ಹಾಗೂ ಉಪೇಂದ್ರ ಅವರ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ವಿಶೇಷ ಎಂಬಂತೆ ಸ್ಯಾಂಡಲ್​ವುಡ್​ನ ಒಂದೇ ಕುಟುಂಬದ ನಾಲ್ಕು ತಲೆಮಾರುಗಳ ಕಲಾವಿದರಾದ ಶಿವರಾಜ ಕುಮಾರ್​, ರಾಘವೆಂದ್ರ ರಾಜಕುಮಾರ್​, ಪುನೀತ್​ ರಾಜಕುಮಾರ್​ ಹಾಗೂ ವಿನಯ್​ ರಾಜಕುಮಾರ್​ ಚಿತ್ರಗಳಲ್ಲಿ ನಟಿಸಿದ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು. ಹಿರಿಯ ಕಲಾವಿದನ ಸಾವಿಗೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

- Advertisement -

Related news

error: Content is protected !!