Saturday, June 20, 2026
spot_imgspot_img
spot_imgspot_img

ಮಂಗಳೂರು: 3.48 ಕೋಟಿ ಮೌಲ್ಯದ ಅಂಬರ್ ಗ್ರೀಸ್ ಮಾರಾಟ ಯತ್ನ- 6 ಮಂದಿ ಅರೆಸ್ಟ್

- Advertisement -
- Advertisement -

ಮಂಗಳೂರು: ಅಕ್ರಮವಾಗಿ ನಿಷೇಧಿತ ಅಂಬರ್ ಗ್ರೀಸ್ ಮಾರಾಟ ಮಾಡಲು ಯತ್ನಿಸುತ್ತಿದ್ದ6 ಮಂದಿಯನ್ನು ಬಂಧಿಸಲಾಗಿದೆ.

ಬಂಧಿತರನ್ನು ಪ್ರಶಾಂತ್, ಸತ್ಯರಾಜ್, ರೋಹಿತ್, ರಾಜೇಶ್, ವಿರುಪಾಕ್ಷ, ನಾಗರಾಜ್ ಎನ್ನಲಾಗಿದೆ. ತಮಿಳುನಾಡು ಮೂಲದ ಮೀನುಗಾರನಿಂದ ಅಂಬರ್ ಗ್ರೀಸ್ ಪಡೆದಿದ್ದ ಆರೋಪಿಗಳು, ಮಂಗಳೂರಿನ ಸುಗಂಧ ದ್ರವ್ಯ ಉತ್ಪಾದನಾ ಫ್ಯಾಕ್ಟರಿಗಳಿಗೆ ಮಾರಾಟಕ್ಕೆ ಯತ್ನಿಸುತ್ತಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಬಂಟ್ವಾಳ ತಾಲೂಕಿನ ಬಾಳೆಪುಣಿ ಗ್ರಾಮದಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ 3.48 ಕೋಟಿ ಮೌಲ್ಯದ 3 ಕೆ.ಜಿ 40 ಗ್ರಾಂ ಅಂಬರ್ ಗ್ರೀಸ್ ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!