Friday, May 3, 2024
spot_imgspot_img
spot_imgspot_img

ಕಾಮನ್‌ ವೆಲ್ತ್‌ ಗೇಮ್ಸ್; ಸ್ವರ್ಣಕ್ಕೆ ಚುಂಬಿಸಿದ ಪಿವಿ ಸಿಂಧು

- Advertisement -G L Acharya panikkar
- Advertisement -

ಬರ್ಮಿಂಗಂ: ಕಾಮನ್‌ ವೆಲ್ತ್‌ ಗೇಮ್ಸ್ ನಲ್ಲಿ ಭಾರತೀಯ ಆಟಗಾರರ ಪದಕ ಬೇಟೆ ಮುಂದುವರೆದಿದ್ದು ಬ್ಯಾಡ್ಮಿಂಟನ್ ನಲ್ಲಿ ಪಿವಿ ಸಿಂಧು ಚಿನ್ನದ ಪದಕ ಗೆದ್ದಿದ್ದಾರೆ.

ಫೈನಲ್ ಪಂದ್ಯದಲ್ಲಿ ಪಿವಿ ಸಿಂಧು ಕೆನಡಾ ಆಟಗಾರ್ತಿ ಮಿಚೆಲ್ ಲೀ ವಿರುದ್ಧ 21-15, 21-13 ಅಂತರದ ಸೆಟ್ ಗಳಿಂದ ಮಣಿಸಿ ಚಿನ್ನದ ಪದಕಕ್ಕೆ ಮುತ್ತಿಟ್ಟರು.

2014ರಲ್ಲಿ ಕಂಚಿನ ಪದಕ ಗೆದ್ದಿದ್ದ ಪಿವಿ ಸಿಂಧು 2018ರಲ್ಲಿ ಬೆಳ್ಳಿಪದಕ ಗೆದ್ದಿದ್ದರು. ಇದೀಗ 2022ರಲ್ಲಿ ಚಿನ್ನದ ಪದಕ ಗೆದ್ದು ಬೀಗಿದ್ದಾರೆ. ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಇಲ್ಲಿಯವರೆಗೂ ಭಾರತಕ್ಕೆ ಒಟ್ಟು 56 ಪದಕಗಳು ಬಂದಿದ್ದು 19 ಚಿನ್ನ, 15 ಬೆಳ್ಳಿ ಹಾಗೂ 22 ಕಂಚು ಸೇರಿದೆ.

- Advertisement -

Related news

error: Content is protected !!