Tuesday, July 21, 2026
spot_imgspot_img
spot_imgspot_img

ಮಂಗಳೂರು: ನಾಪತ್ತೆಯಾಗಿದ್ದ ಸಹೋದರಿಯರು ಜಾವಗಲ್ ನಲ್ಲಿ ಪತ್ತೆ

- Advertisement -
- Advertisement -

ಮಂಗಳೂರು: ಮೊಬೈಲ್ ಬಳಸದಂತೆ ಬುದ್ಧಿವಾದ ಹೇಳಿದ್ದಕ್ಕೆ ಮನೆ ಬಿಟ್ಟು ಹೋಗಿದ್ದ ಇಬ್ಬರು ಸಹೋದರಿಯರನ್ನ ಚಿಕ್ಕಮಗಳೂರಿನಲ್ಲಿ ಮಂಗಳೂರಿನ ಬಜಪೆ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಬಜಪೆ ಗ್ರಾಮದ ಕೊಂಚಾರು ನಿವಾಸಿ ಮಾಮು ಎಂಬುವರ ಇಬ್ಬರು ಪುತ್ರಿಯರಾದ ಮುಬೀನಾ (22) ಮತ್ತು ಬುಶ್ರಾ (21) ಎಂಬುವರು ನಾಪತ್ತೆಯಾಗಿದ್ದರು. ಫೆಬ್ರವರಿ 7ರಂದು ರಾತ್ರಿ ಊಟ ಮಾಡಿ ಮಲಗಿದ್ದವರು, ಬೆಳಗ್ಗೆ ನೋಡಿದಾಗ ಮನೆಯಲ್ಲಿ ಇರಲಿಲ್ಲ. ಈ ಬಗ್ಗೆ ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

vtv vitla
vtv vitla

ಇಬ್ಬರು ಯುವತಿಯರನ್ನು ನಾಪತ್ತೆಯಾದ ಎರಡು‌ ದಿನದಲ್ಲಿ ಬಜಪೆ ಪೊಲೀಸ್ ಇನ್ಸ್​​​ಪೆಕ್ಟರ್ ಸಂದೇಶ್ ಪಿ‌.ಜಿ‌ ಅವರ ತಂಡ ಪತ್ತೆ ಹಚ್ಚುವಲ್ಲಿ‌ ಯಶಸ್ವಿಯಾಗಿದೆ. ಇವರನ್ನು ಚಿಕ್ಕಮಗಳೂರು ಜಿಲ್ಲೆಯ ಜಾವಗಲ್ಎಂಬಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

- Advertisement -

Related news

error: Content is protected !!