Sunday, June 21, 2026
spot_imgspot_img
spot_imgspot_img

ಕರ್ನಾಟಕ-ಕೇರಳ ಗಡಿ ಭಾಗದ ಸಾರಡ್ಕ ಚೆಕ್ ಪೋಸ್ಟ್ ಕೊನೆಗೂ ತೆರವುಗೊಳಿಸಿದ ಜಿಲ್ಲಾಡಳಿತ.

- Advertisement -
- Advertisement -

ವಿಟ್ಲ: ಕಳೆದ ಹಲವು ತಿಂಗಳುಗಳಿಂದ  ಬಂದ್ ಆಗಿದ್ದ ಕರ್ನಾಟಕ ಕೇರಳ ಗಡಿ ಭಾಗ ವಿಟ್ಲ ಕಾಸರಗೋಡು ಸಂಪರ್ಕ ರಸ್ತೆಯ ಸಾರಡ್ಕ ಚೆಕ್ ಪೋಸ್ಟ್ ಕೊನೆಗೂ ತೆರೆದಿದೆ.

ಲಾಕ್ ಡೌನ್ ಪ್ರಾರಂಭದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕೇರಳ ಪ್ರವೇಶ ನಿಷೇಧಿಸಿ ಚೆಕ್ ಪೋಸ್ಟ್ ಬಂದ್  ಮಾಡಿ ಆದೇಶ ಹೊರಡಿಸಿತ್ತು. ಇದೀಗ ಜಿಲ್ಲಾಡಳಿತದ ಸೂಚನೆ ಮೇರೆಗೆ ತೆರೆಯಲಾಗಿದೆ. ವಿಟ್ಲ ಪೊಲೀಸರು ಸ್ಥಳೀಯ ನಿವಾಸಿಗಳಿಂದ ಸಮರ್ಪಕ ದಾಖಲೆಗಳನ್ನು ಪರಿಶೀಲಿಸಿ ತೆರಳಲು ಅವಕಾಶ ನೀಡಿದ್ದಾರೆ. ಈ ಗಡಿ ರಸ್ತೆಯಲ್ಲಿ ಸ್ಥಳೀಯ ನಿವಾಸಿಗಳಿಗೆ ಮಾತ್ರ ಸಂಚರಿಸಲು ಮಾತ್ರ ಅವಕಾಶವಿದೆ ಎನ್ನಲಾಗಿದೆ. ಸಾರಡ್ಕ ಚೆಕ್ ಪೋಸ್ಟ್ ಬಂದ್ ಮಾಡಿದ್ದರಿಂದ ಈ ಭಾಗದ ಸ್ಥಳೀಯರು ಬಹಳಷ್ಟು ಕಷ್ಟ ಅನುಭವಿಸಿದ್ದರು.

- Advertisement -

Related news

error: Content is protected !!