Sunday, June 21, 2026
spot_imgspot_img
spot_imgspot_img

ಅಗಲಿಕೆಯ ನೋವಲ್ಲೂ ಅಭಿಮಾನಿಗಳಿಂದ ಅಪ್ಪು ಹುಟ್ಟುಹಬ್ಬ ಆಚರಣೆ; ಬಹು ನಿರೀಕ್ಷಿತ ಜೇಮ್ಸ್ ಸಿನಿಮಾ ಇಂದು ವಿಶ್ವಾದ್ಯಂತ ಬಿಡುಗಡೆ

- Advertisement -
- Advertisement -

ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ , ಅಭಿಮಾನಿಗಳ ಪಾಲಿನ ಅಪ್ಪು ಅವರ 47ನೇ ಹುಟ್ಟುಹಬ್ಬ ಇಂದು. ಅವರ ಅಗಲುವಿಕೆಯ ನೋವಿನ ನಡುವೆಯೂ ಅಪ್ಪು ಸಮಾಧಿಗೆ ಪತ್ನಿ ಅಶ್ವಿನಿ ಪುನೀತ್ ರಾಜ್‍ಕುಮಾರ್ ಭೇಟಿ ನೀಡಿ ದರ್ಶನ ಪಡೆದಿದ್ದಾರೆ.

ಕರ್ನಾಟಕದಾದ್ಯಂತ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನ ಹುಟ್ಟುಹಬ್ಬವನ್ನು ಮನತುಂಬಿ ಆಚರಿಸುತ್ತಿದ್ದಾರೆ. ಮತ್ತೊಂದೆಡೆ ಅವರು ನಟಿಸಿರುವ ಕೊನೆಯ ಬಹುನಿರೀಕ್ಷಿತ ಜೇಮ್ಸ್ ಇಂದು ವಿಶ್ವಾದ್ಯಂತ ಬಿಡುಗಡೆಯಾಗಿದೆ. ಸಿನಿಮಾ ನೋಡಲು ಮುಂಜಾನೆಯಿಂದಲೇ ಚಿತ್ರಮಂದಿರದತ್ತ ಜನ ಸಾಗರವೇ ಹರಿದುಬರುತ್ತಿದೆ.

ಅಪ್ಪು ಸಮಾಧಿಗೆ ಭೇಟಿ ನೀಡಿದ ಅಶ್ವಿನಿ ಪುನೀತ್ ರಾಜ್‍ಕುಮಾರ್ ಅವರು ಪ್ರದಕ್ಷಿಣೆ ಹಾಕಿ ನಮನ ಸಲ್ಲಿಸಿದರು. ಇದೇ ವೇಳೆ ವರನಟ ಡಾ. ರಾಜ್‍ಕುಮಾರ್ ಹಾಗೂ ಪಾರ್ವತಮ್ಮ ರಾಜ್‍ಕುಮಾರ್ ಅವರ ಸಮಾಧಿಯ ದರ್ಶನವನ್ನು ಸಹ ಪಡೆದರು.

ನಿನ್ನೆ ರಾತ್ರಿ ಪುನೀತ್ ಸಮಾಧಿ ಸ್ಥಳಕ್ಕೆ ಆಗಮಿಸಿದ್ದ ಪುನೀತ್ ರಾಜ್‍ಕುಮಾರ್ ಕುಟುಂಬದವರು ಪುನೀತ್ ಸಮಾಧಿಯ ದರ್ಶನ ಪಡೆದು ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಅಪ್ಪುಗೆ ಹುಟ್ಟುಹಬ್ಬದ ಶುಭಾಶಯ ಹೇಳಿದ್ದಾರೆ. ಇನ್ನೊಂದೆಡೆ ಮುಂಜಾನೆಯಿಂದ ಕಾದು ನಿಂತಿದ್ದ ಅಭಿಮಾನಿಗಳನ್ನು ಅಪ್ಪು ಸಮಾಧಿ ನೋಡಲು ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ.

ಇನ್ನೊಂದೆಡೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ 47ನೇ ಜಯಂತಿ ಹಿನ್ನೆಲೆಯಲ್ಲಿ ಅಪ್ಪು ಅಭಿಮಾನಿಗಳು ರಾಜ್ಯದೆಲ್ಲೆಡೆ ರಕ್ತದಾನ ಶಿಬಿರ, ಉಚಿತ ಆರೋಗ್ಯ ಶಿಬಿರಗಳನ್ನು ಹಮ್ಮಿಕೊಂಡಿದ್ದಾರೆ.

vtv vitla
vtv vitla
- Advertisement -

Related news

error: Content is protected !!