Thursday, June 11, 2026
spot_imgspot_img
spot_imgspot_img

ಉಡುಪಿ: ಮನೆಯ ವಾಸ್ತವ್ಯದ ವಿವಾದ ಕೊಲೆಯಲ್ಲಿ ಅಂತ್ಯ – ತಮ್ಮನಿಂದಲೇ ಅಣ್ಣನ ಹತ್ಯೆ.!

- Advertisement -
- Advertisement -

ಉಡುಪಿ: ಮನೆಯ ವಿಚಾರಕ್ಕೆ ಸಂಬoಧಿಸಿದ ಅಣ್ಣ ತಮ್ಮಂದಿರ ನಡುವಿನ ವಿವಾದವು ಕೊಲೆಯಲ್ಲಿ ಅಂತ್ಯವಾದ ಘಟನೆ ಉಡುಪಿಯ 80 ಬಡಗುಬೆಟ್ಟು ಗ್ರಾಮದ ಕಬ್ಯಾಡಿ ಕಂಬ್ಳಕಟ್ಟೆ ಇಲ್ಲಿ ನಡೆದಿದೆ.

ಇಲ್ಲಿಯ ನಿವಾಸಿ ಬಾಲಕೃಷ್ಣ ನಾಯ್ಕ್(43ವ) ಕೊಲೆಯಾದವರು.

ಬಾಲಕೃಷ್ಣ ಮತ್ತು ಅವರ ತಮ್ಮನಾದ ದಯಾನಂದರಿಗೆ ಮನೆಯ ವಾಸ್ತವ್ಯಕ್ಕೆ ಸಂಬoಧಪಟ್ಟoತೆ ವಿವಾದವಿತ್ತು. ಇದೇ ವಿಚಾರವಾಗಿ ಅಣ್ಣ ತಮ್ಮಂದಿರ ನಡುವೆ ಮಾರ್ಚ್ 16 ರಂದು ಸಂಜೆ 6:30 ರ ಸುಮಾರಿಗೆ ಗಲಾಟೆ ನಡೆದಿದೆ. ಈ ವೇಳೆ ಬಾಲಕೃಷ್ಣ ಅವರ ತಲೆಗೆ ಆರೋಪಿ ದಯಾನಂದ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ತೀವ್ರ ರಕ್ತ ಸ್ತ್ರಾವದಿಂದಾಗಿ ಬಾಲಕೃಷ್ಣ ಮೃತಪಟ್ಟಿದ್ದಾರೆ. ಪೋಲಿಸ್ ತನಿಖೆ ಮುಂದುವರಿದಿದೆ.

ಘಟನಾ ಸ್ಥಳದಲ್ಲಿದ್ದು ಮಣಿಪಾಲ ಠಾಣಾ ನಿರೀಕ್ಷಕ ಮಂಜುನಾಥ್, ಠಾಣಾಧಿಕಾರಿಗಳಾದ ರಾಜಶೇಖರ್ ಹೊಂದಾಳೆ, ಸುಧಾಕರ ತೋನ್ಸೆ ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಶವವನ್ನು ವೈದ್ಯಕೀಯ ಪರೀಕ್ಷೆಗೆ ಸಾಗಿಸಲು ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಇಲಾಖೆಗೆ ಸಹಕರಿಸಿದರು.

- Advertisement -

Related news

error: Content is protected !!