Monday, August 31, 2026
spot_imgspot_img
spot_imgspot_img

ಕಂಪನಿಯ ಗೌಪ್ಯ ಮಾಹಿತಿ ಸೋರಿಕೆ: ಓರ್ವನ ಬಂಧನ, ಸಪ್ನಾ ಬುಕ್ ಹೌಸ್ CEO ವಿರುದ್ಧ ಎಫ್ಐಆರ್

- Advertisement -
- Advertisement -

ಬೆಂಗಳೂರು: ಶಾಲಾ ಮಕ್ಕಳ ಪುಸ್ತಕ ವಿತರಿಸುವ ಸುಭಾಷ್ ಎಂಟರ್​​ಪ್ರೈಸಸ್ ಕಂಪನಿಯ ಗೌಪ್ಯ ಮಾಹಿತಿಯನ್ನು ಬೇರೆ ಕಂಪನಿಗೆ ನೀಡುತ್ತಿದ್ದ ಆರೋಪದಡಿ ಓರ್ವನನ್ನು ಜಗಜೀವನ್ ರಾಮನಗರ ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ಈ ಸಂಬಂಧ ಸಪ್ನಾ ಬುಕ್ ಹೌಸ್ ಸಿಇಒ ನಿಜೇಶ್ ಶಾ ವಿರುದ್ಧವೂ ಪ್ರಕರಣ ದಾಖಲಾಗಿದೆ.

ಸುಭಾಷ್ ಎಂಟರ್​​ಪ್ರೈಸಸ್ ಮಾಲೀಕ‌ ನಾಗೇಶ್ ನೀಡಿದ ದೂರಿನ‌ ಮೇರೆಗೆ ಕಂಪನಿಯ ಆಡಳಿತ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೋಹನ್ ಎಂಬಾತನನ್ನು ಬಂಧಿಸಲಾಗಿದೆ.‌ ಕಾನೂನುಬಾಹಿರವಾಗಿ ಗೌಪ್ಯ ಮಾಹಿತಿ ತರಿಸಿಕೊಂಡ ಆರೋಪದಡಿ ನಿಜೇಶ್ ಶಾ, ಕಂಪನಿಯ ಸಿಬ್ಬಂದಿ ಮಧುಕರ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಶಾಲಾ ಮಕ್ಕಳ ಪುಸ್ತಕ ವಿತರಣೆಯಲ್ಲಿ ದಕ್ಷಿಣ ಭಾರತದಲ್ಲೇ ಹೆಸರುವಾಸಿಯಾಗಿರುವ ಸುಭಾಷ್ ಎಂಟರ್​​ಪ್ರೈಸಸ್ ಕಂಪನಿಯಲ್ಲಿ ಮೋಹನ್ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ. ಇ-ಮೇಲ್​ ಮೂಲಕ ಸುಭಾಷ್ ಎಂಟರ್​​ಪ್ರೈಸಸ್ ಕಂಪನಿಗೆ ಬಂದಿದ್ದ ಆರ್ಡರ್ ಹಾಗೂ ರಿಯಾಯಿತಿ ದರ, ಬೆಲೆ ಸೇರಿದಂತೆ ಇನ್ನಿತರ ಗೌಪ್ಯ ಮಾಹಿತಿಗಳನ್ನು ಸಪ್ನಾ ಬುಕ್ ಹೌಸ್ ಸಿಇಒ‌‌ ನಿಜೇಶ್ ಶಾ ಅವರಿಗೆ ಕಳುಹಿಸುತ್ತಿದ್ದ. ಮೋಹನ್ ಮಾಡಿದ ಕೃತ್ಯದಿಂದ ಸುಭಾಷ್ ಎಂಟರ್​​ಪ್ರೈಸಸ್​​ಗೆ ಬರಬೇಕಿದ್ದ ಆರ್ಡರ್ ರದ್ದಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ ಎಂದು ಆರೋಪಿಸಿ ಮಾಲೀಕ‌‌ ನಾಗೇಶ್ ದೂರು ನೀಡಿದ್ದರು.

vtv vitla
vtv vitla
- Advertisement -

Related news

error: Content is protected !!