Tuesday, September 8, 2026
spot_imgspot_img
spot_imgspot_img

ಶ್ರೀ ಕೃಷ್ಣ ಯುವಕ ಮಂಡಲ (ರಿ) ಸಿಟಿ ಗುಡ್ಡೆ ಇದರ ಆಶ್ರಯದಲ್ಲಿ ಸಾಧಕರಿಗೆ ಸನ್ಮಾನ

- Advertisement -
- Advertisement -

ಪುತ್ತೂರು: ಶ್ರೀ ಕೃಷ್ಣ ಯುವಕ ಮಂಡಲ ರಿಜಿಸ್ಟರ್ ಸಿಟಿ ಗುಡ್ಡೆ ಇದರ ಆಶ್ರಯದಲ್ಲಿ ಶಿವಮಣಿ ಕಲಾಸಂಘ ಶಿವನಗರ ಇದರ ಕಲಾವಿದರಾದ ಪ್ರತೀತಿ ನೆಟ್ಟನಿಗೆ ಇವರನ್ನು ಶಿವನಗರ ಅಂಗನವಾಡಿ ವಠಾರದಲ್ಲಿ ಸನ್ಮಾನಿಸಲಾಯಿತು.

ಮುಖ್ಯ ಅತಿಥಿಯಾಗಿ ರಂಗಭೂಮಿ ಕಲಾವಿದ ಚಲನಚಿತ್ರ ನಟ ಜೆಪಿ ಸಂತೋಷ್ ಮುರ ಶುಭ ಹಾರೈಸಿದರು. ಅತಿಥಿಗಳಾಗಿ ರಂಗಭೂಮಿ ಕಲಾವಿದ ಗಾಯಕರಾದ ದೀಪಕ್ ಉಪ್ಪಿನಂಗಡಿ, ಶಿವಮಣಿ ಭಜನಾ ತಂಡದ ಸದಸ್ಯೆ ಅರುಣ, ಶಿವಮಣಿ ಕಲಾಸಂಘದ ಸಂಚಾಲಕ ಮನು ಶಿವನಗರ, ಶಿವಮಣಿ ಕಲಾ ಸಂಘದ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ರೂವಾರಿ ನವೀನ್ ರವರು ಅತಿಥಿಗಳಿಗೆ ಹೂ ನೀಡಿ ಗೌರವಿಸಿದರು. ಸ್ನೇಹ ಸಿಲ್ಕ್ ರೆಡಿಮೆಡ್ಸ್ ಉದ್ಯೋಗಿ, ಶ್ರೀಕೃಷ್ಣ ಯುವಕ ಮಂಡಲ ಇದರ ಅಧ್ಯಕ್ಷರಾದ ರಾಜೀವ್ ಗೌಡರವರು ಸನ್ಮಾನ ಪತ್ರವನ್ನು ಓದಿದರು. ಕಲಾವಿದ ಕೃಷ್ಣಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು.

- Advertisement -

Related news

error: Content is protected !!