Thursday, September 3, 2026
spot_imgspot_img
spot_imgspot_img

ರಿವಾಲ್ವಾರ್ ನಲ್ಲಿ ಗುಂಡಿಕ್ಕಿ ಕೊಲೆ ಮಾಡುವುದಾಗಿ ಬೆದರಿಕೆ.ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ

- Advertisement -
- Advertisement -

ವಿಟ್ಲ: ಅಳಿಕೆ ಗ್ರಾಮದ ಎರುಂಬು ಎಂಬಲ್ಲಿ ದಾರಿ ವಿಚಾರದಲ್ಲಿ ವ್ಯಕ್ತಿಯೊಬ್ಬರಿಗೆ ಇಬ್ಬರು ಸೇರಿಕೊಂಡು ರಿವಾಲ್ವಾರ್ ನಲ್ಲಿ ಗುಂಡಿಕ್ಕಿ ಕೊಲೆ ನಡೆಸುವುದಾಗಿ ಬೆದರಿಕೆ ಹಾಕಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಳಿಕೆ ಗ್ರಾಮದ ಎರುಂಬು ಮೂಡಯಿಬೆಟ್ಟು ನಿವಾಸಿ ರಾಮಚಂದ್ರ ಬಲ್ಲಾಳ್ ದೂರು ನೀಡಿದವರು.

ಆರೋಪಿಗಳಾದ ಅಳಿಕೆ ಗ್ರಾಮದ ಎರುಂಬು ಮೂಡಯಿಬೆಟ್ಟು ನಿವಾಸಿಗಳಾದ ಉದನೇಶ್ವರ ಭಟ್‌, ಆದರ್ಶ್‌ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ.

ಸರ್ಕಾರಿ ಜಾಗದ ಮೂಲಕ ಮಣ್ಣು ರಸ್ತೆ ಹಾದು ಹೋಗುತ್ತಿದ್ದು. ಈ ರಸ್ತೆಯನ್ನು ರಾಮಚಂದ್ರ ಬಲ್ಲಾಳ್ ಅವರು ರಿಪೇರಿ ಮಾಡುತ್ತಿರುವಾಗ ಆರೋಪಿಗಳಾದ ಉದನೇಶ್ವರ ಭಟ್‌ ಮತ್ತು ಆದರ್ಶ್‌ ರವರು ಕಬ್ಬಿಣದ ರಾಡ್ ಮತ್ತು ಕತ್ತಿಯನ್ನು ಹಿಡಿದುಕೊಂಡು ಬಂದು ಪಿರ್ಯಾದಿದರರನ್ನು ಉದ್ದೇಶಿಸಿ ಅವಾಚ್ಯ ಶಬ್ದಗಳಿಂದ ಬೈದು, ರಿವಾಲ್ವಾರ್ ತಂದು ನಿಮ್ಮನ್ನು ಗುಂಡಿಕ್ಕಿ ಕೊಲೆ ನಡೆಸುವುದಾಗಿ ಹೇಳಿ ಜೀವಬೆದರಿಕೆ ಹಾಕಿರುವುದಾಗಿ ಆರೋಪಿಸಲಾಗಿದೆ.

- Advertisement -

Related news

error: Content is protected !!