- Advertisement -
- Advertisement -

ಮಂಗಳೂರು: ಟಿಪ್ಪರ್ ಹರಿದು ಬಾಲಕನೋರ್ವ ಸಾವನ್ನಪ್ಪಿದ ದಾರುಣ ಘಟನೆ ನಗರದ ಬಜಾಲ್ ಕಟ್ಟಪುಣಿ ಬಳಿ ಏ. 20 ರ ಬುಧವಾರ ಸಂಜೆ 6 ಗಂಟೆಯ ವೇಳೆಗೆ ನಡೆದಿದೆ.

ಮೃತ ಬಾಲಕನನ್ನು ಬಜಾಲ್ ಹಟ್ಟಿಮನೆ ನಿವಾಸಿ ಹಿದಾಯತುಲ್ಲಅವರ ಪುತ್ರ 6 ವರ್ಷದ ಮೊಹಮ್ಮದ್ ಜೀಶನ್ ಎಂದು ಗುರುತಿಸಲಾಗಿದೆ.

‘ಬಾಲಕ ಮೊಹಮ್ಮದ್ ಜೀಶನ್ ಬಜಾಲ್ ಕಟ್ಟಪುಣಿ ಬಳಿ ಕೊರ್ದಬ್ಬು ದೈವಸ್ಥಾನದ ಹಿಂಬಾಗದ ರಸ್ತೆಯ ಕೆರೆಯ ಬಳಿ ರಸ್ತೆಯಲ್ಲಿ ಸೈಕಲ್ ನಲ್ಲಿ ಆಡುತ್ತಿದ್ದಾಗ ಟಿಪ್ಪರ್ ಲಾರಿ ಹರಿದು ಮೃತಪಟ್ಟಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.


- Advertisement -








