Wednesday, September 23, 2026
spot_imgspot_img
spot_imgspot_img

ಕಾರ್ಕಳ: ವಾರದ ಅಂತರದಲ್ಲಿ ಒಂದೇ ಮರಕ್ಕೆ ಎರಡು ಕಾರು ಡಿಕ್ಕಿ; ಅಪಾಯದಿಂದ ಪಾರು

- Advertisement -
- Advertisement -

ಕಾರ್ಕಳ: ಒಂದೇ ವಾರದ ಅಂತರದಲ್ಲಿ ಒಂದೇ ಮರಕ್ಕೆ ಎರಡು ಕಾರುಗಳು ಡಿಕ್ಕಿ ಹೊಡೆದಿರುವ ಘಟನೆಯು ಈದು ಹೊಸ್ಮಾರು ಎಂಬಲ್ಲಿ ಬೆಳಕಿಗೆ ಬಂದಿದೆ.

ಎಪ್ರಿಲ್ 25ರ ಸೋಮವಾರ ತಡರಾತ್ರಿ ವೇಳೆಗೆ ಖಾಸಗಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಈದು ಪ್ರಾಥಮಿಕ ಆಸ್ಪತ್ರೆಯ ಕ್ರಾಸ್ ರಸ್ತೆಯ ಬಳಿ ಇರುವ ಮರವೊಂದಕ್ಕೆ ಡಿಕ್ಕಿ ಹೊಡೆದಿದೆ.

ಇದೇ ಮರಕ್ಕೆ ಎಪ್ರಿಲ್ 22ರಂದು ಬೆಂಗಳೂರು ನೊಂದಾಯಿತ ಕಾರೊಂದು ಡಿಕ್ಕಿ ಹೊಡೆದಿದ್ದು, ಒಂದೆಡೆಯಲ್ಲಿ ಸುರಿಯುತ್ತಿದ್ದ ಮಳೆಯಲ್ಲಿ ಕಾರಿನ ಚಾಲಕರು ಅತೀ ವೇಗ ಹಾಗೂ ನಿರ್ಲಕ್ಷ್ಯ ರೀತಿಯಲ್ಲಿ ವಾಹನ ಚಲಾಯಿಸಿ ಹೋಗುತ್ತಿರುವುದು ಘಟನೆಗೆ ಕಾರಣವಾಗಿದೆ ಎನ್ನಲಾಗಿದೆ. ಈ ಎರಡು ಅಪಘಾತಗಳು ತೀವ್ರತೆಯಿಂದ ಕೂಡಿದರೂ ಯಾವುದೇ ಜೀವಾಪಾಯ ಸಂಭವಿಸಿಲ್ಲ.

vtv vitla
- Advertisement -

Related news

error: Content is protected !!