Tuesday, September 22, 2026
spot_imgspot_img
spot_imgspot_img

ನಾಗಬನದಲ್ಲಿದ್ದ ನಾಗನ ಕಲ್ಲುಗಳನ್ನು ಎಸೆದು ವಿಕೃತಿ ಮೆರೆದ ದುಷ್ಕರ್ಮಿಗಳು

- Advertisement -
- Advertisement -
vtv vitla
vtv vitla

ಕಿನ್ನಿಗೋಳಿ: ನಾಗಬನದಲ್ಲಿದ್ದ 6 ನಾಗನ ಕಲ್ಲುಗಳನ್ನು ಬೇರೆ ಬೇರೆ ಜಾಗದಲ್ಲಿ ಎಸೆದು ವಿಕೃತಿ ಮೆರೆದ ಘಟನೆ ಕಟೀಲು ಮಲ್ಲಿಗೆಯಂಗಡಿಯಲ್ಲಿ ರವಿವಾರ ನಡೆದಿದೆ.

ಕಟೀಲು ಮಲ್ಲಿಗೆಯಂಗಡಿಯ ಪಡುಸಾಂತ್ಯ ಭಂಡಾರಿ ಮನೆತನದ ನಾಗಬನದಲ್ಲಿದ್ದ ನಾಗನ ಕಲ್ಲುಗಳನ್ನು ದುಷ್ಕರ್ಮಿಗಳು ಬೇರೆ ಜಾಗದಲ್ಲಿ ಎಸೆದಿದ್ದಾರೆ. ರವಿವಾರ ಬೆಳಗ್ಗೆ ಮನೆತನದ ವ್ಯಕ್ತಿಯೊಬ್ಬರು ಈ ಜಾಗದಲ್ಲಿ ತೆರಳುತ್ತಿದ್ದ ವೇಳೆ ನಾಗನ ಕಲ್ಲು ಆವರಣದಿಂದ ಹೊರಗೆ ಬಿದ್ದಿರುವುದನ್ನು ಗಮನಿಸಿದ್ದಾರೆ. ಬಳಿಕ ಪರಿಶೀಲಿಸಿದಾಗ ನಾಗಬನದಲ್ಲಿ ಪ್ರತಿಷ್ಠೆ ಮಾಡಿದ ಜಾಗದಿಂದ 6 ನಾಗನ ಕಲ್ಲುಗಳನ್ನು ಎಸೆದು ಬೇರೆ ಬೇರೆ ಜಾಗದಲ್ಲಿ ಹಾಕಿರುವುದು ಗೊತ್ತಾಗಿದೆ.

ತಪ್ಪಿತಸ್ಥರನ್ನು ಶೀಘ್ರ ಬಂಧಿಸಿ ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕ ಈಶ್ವರ್‌ ಕಟೀಲು ಒತ್ತಾಯಿಸಿದ್ದಾರೆ.

- Advertisement -

Related news

error: Content is protected !!