Sunday, June 21, 2026
spot_imgspot_img
spot_imgspot_img

ದೇಶದ ವಿವಿಧೆಡೆ ಬಿಸಿಗಾಳಿ ಸಮಸ್ಯೆ; ಯೂರೋಪ್ ಪ್ರವಾಸದಿಂದ ಹಿಂದಿರುಗಿದ ತಕ್ಷಣ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಭೆ

- Advertisement -
- Advertisement -

ದೆಹಲಿ: ಯೂರೋಪ್ ಪ್ರವಾಸದಿಂದ ಹಿಂದಿರುಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸರಣಿ ಸಭೆಗಳನ್ನು ನಡೆಸಲಿದ್ದಾರೆ. ದೇಶದ ವಿವಿಧೆಡೆ ಕಾಣಿಸಿಕೊಂಡಿರುವ ಬಿಸಿಗಾಳಿ ಸಮಸ್ಯೆ ಮತ್ತು ಮುಂದಿನ ಮಳೆಗಾಲಕ್ಕೆ ಆಗಿರುವ ಸಿದ್ಧತೆಗಳು ಪರಾಮರ್ಶೆ ನಡೆಸಲಿದ್ದಾರೆ. ಇಂದು ಒಂದೇ ದಿನ ಸುಮಾರು 8 ಸಭೆಗಳನ್ನು ಪ್ರಧಾನಿ ನಡೆಸುವ ಸಾಧ್ಯತೆಯಿದೆ.

ತೀಕ್ಷ್ಯ ಬಿಸಿಗಾಳಿಯ ಕಾರಣದಿಂದಾಗಿ ದೇಶದ ವಿವಿಧೆಡೆ ಉಷ್ಣಾಂಶದ ಪ್ರಮಾಣ ಐತಿಹಾಸಿಕ ಗರಿಷ್ಠ ಮಟ್ಟ ಮುಟ್ಟಿದೆ. ದೆಹಲಿ ಸೇರಿದಂತೆ ದೇಶದ ವಿವಿಧೆಡೆ ನಿನ್ನೆ (ಮೇ 4) ಅಲ್ಪಪ್ರಮಾಣದ ಮಳೆಯಾಗಿದ್ದು ವಾತಾವರಣವನ್ನು ತಂಪುಗೊಳಿಸಿತು. ಮಳೆಯ ಪ್ರಭಾವದಿಂದ ಕಡಿಮೆಯಾಗಿರುವ ಉಷ್ಣಾಂಶವು ಒಂದೇ ದಿನಕ್ಕೆ ತಿರುವುಮುರುವಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಶುಕ್ರವಾರದಿಂದ (ಮೇ 6) ಮತ್ತೆ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಯಿದ್ದು, ಭಾನುವಾರದ ಹೊತ್ತಿಗೆ ದೇಶಾದ್ಯಂತ ಉಷ್ಣಾಂಶ ಹೆಚ್ಚಾಗಿ, ಅಪಾಯಕಾರಿ ಪರಿಸ್ಥಿತಿ ತಲುಪಬಹುದು ಎಂದು ಹವಾಮಾನ ಇಲಾಖೆಯ ಉನ್ನತ ಅಧಿಕಾರಿಗಳು ಹೇಳಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಕಳೆದ ಕೆಲ ವಾರಗಳಿಂದೀಚೆಗೆ ಕಾಡ್ತಿಚ್ಚು ಹೆಚ್ಚಾಗಿದ್ದು, ಧರ್ಮಶಾಲಾ ಸುತ್ತಮುತ್ತಲ ಪ್ರದೇಶದಲ್ಲಿದ್ದ ಪೈನ್ ಮರದ ಕಾಡುಗಳ ಚಿಗುರು

ಸುಟ್ಟುಹೋಗಿದೆ. ಹಿಮಾಚರ ಪ್ರದೇಶದಲ್ಲಿ ಸಾಮಾನ್ಯವಾಗಿ ಈ ಹೊತ್ತಿನಲ್ಲಿ ಮಳೆ ಸುರಿಯುವುದು ವಾಡಿಕೆ. ಕೆಲ ಪ್ರದೇಶದಲ್ಲಿ ಹಿಮ ಸಹ ಸುರಿಯುತ್ತಿತ್ತು. ಆದರೆ ಈ ವರ್ಷ ಮಾತ್ರ ಎಲ್ಲವೂ ತಿರುವುಮುರುವಾಗಿದೆ. ಕಳೆದ ಎರಡು ತಿಂಗಳಲ್ಲಿ ಒಮ್ಮೆಯೂ ಮಳೆ ಬಂದಿಲ್ಲ.

ದೇಶದ ವಿವಿಧೆಡೆ ಉಷ್ಣಾಂಶ ಹೆಚ್ಚಾದ ಹಿನ್ನೆಲೆಯಲ್ಲಿ ವಿದ್ಯುತ್‌ಗೂ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಗೆ ತಕ್ಕಷ್ಟು ವಿದ್ಯುತ್ ಪೂರೈಸಲು ಸಾಧ್ಯವಾಗುತ್ತಿಲ್ಲ. ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕಗಳಲ್ಲಿ ಕಲ್ಲಿದ್ದಲು ಕೊರತೆ ಕಾಣಿಸಿಕೊಂಡಿದ್ದು, ಕಲ್ಲಿದ್ದಲು ಸಾಗಣೆಗೆ ವೇಗ ನೀಡಲೆಂದು ಭಾರತೀಯ ರೈಲ್ವೆಯು 1,100 ಪ್ರಯಾಣಿಕರ ರೈಲುಗಳ ಸಂಚಾರ ರದ್ದುಪಡಿಸಿದೆ.

- Advertisement -

Related news

error: Content is protected !!