Sunday, June 29, 2025
spot_imgspot_img
spot_imgspot_img

ಗೋಡೆ ಕೊರೆದು ಚಿನ್ನಾಭರಣ ದೋಚಿದ 10 ಮಂದಿ ಅಂತಾರಾಜ್ಯ ಕಳ್ಳರು ಅರೆಸ್ಟ್

- Advertisement -
- Advertisement -

ಜ್ಯುವೆಲರ್ಸ್ ಮಳಿಗೆಯ ಗೋಡೆ ಕೊರೆದು ಚಿನ್ನಾಭರಣ ದೋಚಿದ್ದ 10 ಮಂದಿ ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬೆಂಗಳೂರಿನ ಜೆ.ಪಿ. ನಗರ 1ನೇ ಹಂತದಲ್ಲಿರುವ ಪ್ರಿಯದರ್ಶಿನಿ ಜ್ಯುವೆಲರ್ಸ್ ಮಳಿಗೆಯ ಗೋಡೆ ಕೊರೆದು 2.50 ಕೋಟಿ ರೂ. ಮೌಲ್ಯದ 5 ಕೆ.ಜಿ. ಚಿನ್ನಾಭರಣ ದೋಚಿದ್ದ 10 ಮಂದಿ ಅಂತಾರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಜೆ.ಪಿ. ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಜಾರ್ಖಂಡ್ ಮೂಲದ ಎ.ಎಂ. ಹುಸೈನ್ (23), ಮನರುಲ್ಲಾ ಹಕ್(30), ಸೈಫ?ದ್ದೀನ್ ಶೇಖ್ (36), ಮನರುಲ್ಲಾ ಶೇಖ್ (65), ಸುಲೇಮಾನ್ ಶೇಖ್ (49),ಸಲೀಂ ಶೇಖ್ (36), ರಮೇಶ್ ಬಿಸ್ತಾ (37), ಜಹೂರ್ ಆಲಂ(28), ಅಜಿಜೂರ್ ರೆಹೆಮಾನ್(27), ಶೈನೂರ್ ಬೀಬಿ(65) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳಿಂದ 55 ಲಕ್ಷ ರೂ. ಮೌಲ್ಯದ 1 ಕೆ.ಜಿ. 100 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ. ಕಳೆದ ಮಾರ್ಚ್ನಲ್ಲಿ ಜ್ಯುವೆಲರಿಗೆ ಹೊಂದಿಕೊoಡಿರುವ ಪಕ್ಕದ ಕಟ್ಟಡದ 2ನೇ ಮಹಡಿಯಲ್ಲಿ ಬಾಡಿಗೆಗೆ ಮನೆ ಪಡೆದಿದ್ದು, .2 ವಾರಗಳ ಕಾಲ ಚಿನ್ನದಂಗಡಿಗೆ ಹೊಂದಿಕೊoಡಿರುವ ಗೋಡೆಯನ್ನು ಮನೆಯೊಳಗಿನಿಂದ ಕಬ್ಬಿಣದ ಚೂಪಾದ ವಸ್ತು ಹಾಗೂ ಹಾರೆಯಿಂದ ಹಂತ-ಹoತವಾಗಿಕೊರೆಯಲು ಆರಂಭಿಸಿದ್ದರು. ಇನ್ನು ಏ.17ರಂದು ಇತ್ತ ಗೋಡೆ ಕೊರೆದು ಜ್ಯುವೆಲರ್ನೊಳಗೆ ನುಗ್ಗಿದ ಆರೋಪಿಗಳು, ಮೊದಲಿಗೆ ಅಲ್ಲಿದ್ದ ಸಿಸಿ ಕ್ಯಾಮರಾ ಸಂಪರ್ಕ ಕಡಿತಗೊಳಿಸಿದ್ದರು. ನಂತರ ಲಾಕರ್ ಅನ್ನು ಗ್ಯಾಸ್ ಕಟ್ಟರ್‌ನಿಂದ ಕೊರೆದು 2.50 ಕೋಟಿ ರೂ. ಮೌಲ್ಯದ 5 ಕೆ.ಜಿ. ಚಿನ್ನಾಭರಣವನ್ನು ರಾತ್ರೋ-ರಾತ್ರಿ ದೋಚಿದ್ದರು.

- Advertisement -

Related news

error: Content is protected !!