Wednesday, July 22, 2026
spot_imgspot_img
spot_imgspot_img

ಮಂಗಳೂರು: ಖ್ಯಾತ ಧಾರವಾಹಿ ನಟ ಸುನೀಲ್ ಬಜಾಲ್ ನಿಧನ

- Advertisement -
- Advertisement -

ಮಂಗಳೂರು: ಕೊಂಕಣಿ ಮತ್ತು ತುಳು ಮನರಂಜನಾ ಕ್ಷೇತ್ರದಲ್ಲಿ ಖ್ಯಾತರಾಗಿದ್ದ ನಟ ಸುನೀಲ್ ಬಜಾಲ್(45) ಅವರು ಮೇ 22 ರಂದು ಭಾನುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಸುನಿಲ್ ಅವರು ಕೊಂಕಣಿ ನಾಟಕದ ಮೂಲಕ ನಟನಾ ವೃತ್ತಿ ಪ್ರಾರಂಭಿಸಿ ಬಳಿಕ ಕೊಂಕಣಿ ಧಾರಾವಾಹಿಗಳಲ್ಲಿಯೂ ನಟಿಸಿದ್ದಾರೆ.

vtv vitla
vtv vitla

ತಮ್ಮ ನಟನಾ ಕೌಶಲ್ಯದಿಂದ ಸುನಿಲ್ ಅವರು ಫ್ಲಾಟ್ ನಂ 403 ಧಾರಾವಾಹಿಯಲ್ಲಿ ‘ಬೆನ್ನ’ ಪಾತ್ರದಲ್ಲಿ ಮಿಂಚಿದ್ದು, ಕೊಂಕಣಿ ಧಾರಾವಾಹಿ ‘ಗಾಡ್ ಫಾದರ್’ ಮತ್ತು ಕೊಂಕಣಿ ಚಲನಚಿತ್ರ ‘ಕೊಂಬ್ಯಾಟ್’ ನಲ್ಲಿ ಸಹ ನಟಿಸಿದ್ದಾರೆ.

ಇನ್ನು ಮಂಗಳೂರಿನ ಕೊಂಕಣಿ ನಾಟಕ ಸಭಾದ ಸಕ್ರಿಯ ಸದಸ್ಯರೂ ಆಗಿದ್ದ ಅವರು, ವೃತ್ತಿಯಲ್ಲಿ ಐಟಿಐ ವಿದ್ಯಾರ್ಥಿಗಳಿಗೆ ಶಿಕ್ಷಕರಾಗಿದ್ದರು.

ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಓರ್ವ ಸಹೋದರನನ್ನು ಅಗಲಿದ್ದಾರೆ.

- Advertisement -

Related news

error: Content is protected !!