Monday, September 21, 2026
spot_imgspot_img
spot_imgspot_img

ಉಡುಪಿ: ರೈಲಿನಿಂದ ಬೀಳುತ್ತಿದ್ದ ವೃದ್ದನ ರಕ್ಷಿಸಿದ ರೈಲ್ವೇ ರಕ್ಷಣಾ ದಳದ ಸಿಬ್ಬಂದಿ

- Advertisement -
- Advertisement -

ಉಡುಪಿ: ಸಂಚರಿಸುತ್ತಿದ್ದ ರೈಲಿನಿಂದ ಆಯತಪ್ಪಿ ಜಾರಿ ಬೀಳುತ್ತಿದ್ದ ಹಿರಿಯ ನಾಗರಿಕರೊಬ್ಬರನ್ನು ರೈಲ್ವೇ ರಕ್ಷಣಾ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಉಡುಪಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ.

ಉಡುಪಿ ರೈಲ್ವೇ ನಿಲ್ದಾಣ ದ ಪ್ಲಾಟ್ ಫಾರಂ ನಂಬರ್ 1ರಲ್ಲಿ ಈ ಘಟನೆ ನಡೆದಿದ್ದು ರಕ್ಷಿಸಲ್ಪಟ್ಟ ವ್ಯಕ್ತಿಯನ್ನು ಪೆರ್ಡೂರು‌ ಮೂಲದ ಕುಟ್ಟಿ ಕುಂದನ್ (70 ವರ್ಷ) ಎಂದು ಗುರುತಿಸಲಾಗಿದೆ.

ಕುಟ್ಟಿ ಕುಂದನ್ ತಮ್ಮ ಮಗಳನ್ನು ಟ್ರೈನ್ ಹತ್ತಿಸುವ ಸಲುವಾಗಿ ಉಡುಪಿ ರೈಲ್ವೇ ನಿಲ್ದಾಣಕ್ಕೆ ಆಗಮಿಸಿದ್ದರು. ಮಗಳನ್ನು ರೈಲಿನಲ್ಲಿ ಕುಳ್ಳಿರಿಸಿ ಚಲಿಸುವ ರೈಲಿನಿಂದ ಇಳಿಯುವ ವೇಳೆ ಆಯತಪ್ಪಿ ಬಿದ್ದಿದ್ದು ರೈಲಿನ ಬಾಗಿಲಿನ ಹ್ಯಾಂಡಲ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡು ರೈಲಿನೊಂದಿಗೆ ಎಳೆದೊಯ್ಯಲ್ಪಡುತಿದ್ದರು. ಇದನ್ನು ಗಮನಿಸಿದ ರೈಲ್ವೆ ಪೋಲಿಸ್ ಸಿಬ್ಬಂದಿ ಸಜೀರ್ ತಕ್ಷಣವೇ ಬಂದು ಅವರನ್ನು ಅಲ್ಲಿಂದ ಪಾರು ಮಾಡಿ ಪ್ರಥಮ ಚಿಕಿತ್ಸೆ ನೀಡಿ ಕುಟುಂಬಸ್ಥರೊಂದಿಗೆ ವ್ಯಕ್ತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಟ್ಟಿ ಕುಂದನ್ ಅವರನ್ನು ರಕ್ಷಿಸಿದ್ದಕ್ಕಾಗಿ ಸಜೀರ್ ಅವರನ್ನು ಕುಟುಂಬಸ್ಥರು ಅಭಿನಂದಿಸಿದ್ದಾರೆ.

- Advertisement -

Related news

error: Content is protected !!