- Advertisement -
- Advertisement -


ವಿಟ್ಲ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಹಾಗೂ ಶಕ್ತಿ ಯುವಕೇಂದ್ರ ಪುಚ್ಚೆಗುತ್ತು ಇದರ ಸಹಯೋಗದೊಂದಿಗೆ ಇಶ್ರಮ ಕಾರ್ಡ್ ಮತ್ತು ಪಾನ್ ಕಾರ್ಡ್ಗಳ ಸೌಲಭ್ಯವನ್ನು ಒದಗಿಸುವ ಕಾರ್ಯಕ್ರಮವು ಪುಚ್ಚೆಗುತ್ತು ಅಂಗನವಾಡಿಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಮಾಡಿದ ಪಿ.ಡಿ.ಓ ವೆಂಕಟೇಶ್ ರವರು ಸೌಲಭ್ಯದ ಮಾಹಿತಿಯನ್ನು ತಿಳಿಸಿಕೊಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಧರ್ಮಸ್ಥಳ ಗ್ರಾಮಭಿವುದ್ಧಿ ಯೋಜನೆಯ ವಿಟ್ಲ ವಲಯದ ಮೇಲ್ವಿಚಾರಕಿ ಸರಿತಾ ಇವರು ಪ್ರಾಸ್ತವಿಕ ಭಾಷಣವನ್ನು ಮಾಡಿದರು. ವೇದಿಕೆಯಲ್ಲಿ ವಿಟ್ಲ ಪಟ್ಟಣ ಪಂಚಾಯತ್ ಸದಸ್ಯ ವಸಂತ ಕುಲಾಲ್, ವಿಟ್ಲ ಬಿ ಒಕ್ಕೂಟದ ಅಧ್ಯಕ್ಷರು ಮತ್ತು ಶಕ್ತಿ ಯುವ ಕೇಂದ್ರದ ರಾಜೇಶ್, ವಿಟ್ಲ. ಬಿ ವಲಯದ ಸೇವಾ ಪ್ರತಿನಿಧಿ ಗೀತಾ ಉಪಸ್ಥಿತರಿದ್ದರು.



- Advertisement -








