- Advertisement -
- Advertisement -


ಕಾಸರಗೋಡು: ಗುಂಡೇಟು ತಗುಲಿ ಸಿಪಿಐ ಮುಖಂಡರೋರ್ವರು ಮೃತಪಟ್ಟ ದಾರುಣ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಪೊಯಿನಾಚಿ ಕರಿಚ್ಚೇರಿಯಲ್ಲಿ ನಡೆದಿದೆ.
ಕರಿಚ್ಚೇರಿ ಯ ಮಾಧವನ್ (65) ಮೃತಪಟ್ಟವರು. ಹಲಸು ಕೊಯ್ಯಲು ಹಿತ್ತಿಲಿಗೆ ತೆರಳಿದ್ದ ಮಾಧವನ್ ರವರು ನೆಲದಲ್ಲಿಟ್ಟಿದ್ದ ಕೋವಿಯನ್ನು ಮೆಟ್ಟಿದಾಗ ಗುಂಡು ಕಾಲಿಗೆ ತಗಲಿದೆ.

ಕಾಡುಹಂದಿಗೆ ಗುರಿ ಇಟ್ಟು ಈ ಕೋವಿಯನ್ನು ಪರಿಸರವಾಸಿಯೊಬ್ಬರು ಹಿತ್ತಿಲಿನಲ್ಲಿ ತಂದಿಟ್ಟಿದ್ದರು ಎನ್ನಲಾಗಿದೆ. ಘಟನೆ ನಡೆದ ಗಂಟೆಗಳ ಬಳಿಕ ಇದು ಮನೆಯವರ ಗಮನಕ್ಕೆ ಬಂದಿದೆ . ಕೂಡಲೇ ಕಾಸರಗೋಡು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಗಳೂರು ಆಸ್ಪತ್ರೆಗೆ ಕೊಂಡೊಯ್ದರೂ ಜೀವ ಉಳಿಸಲಾಗಲಿಲ್ಲ . ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

- ಶ್ರೀ ದುರ್ಗಾ ಕಲಾತಂಡದ ಹೊಸ ನಾಟಕ ‘ಕಾಲ ಭೈರವಿ’ ಬಿಡುಗಡೆ
- ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ್ ಅಧಿಕಾರ ಸ್ವೀಕಾರ!
- ಬೆಳ್ತಂಗಡಿ: ಮನೆಗೆ ನುಗ್ಗಿದ ಕಳ್ಳರು: ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳವು, ಪ್ರಕರಣ ದಾಖಲು
- ಮಂಗಳೂರು: ಎಕ್ಕೂರು ಹೆದ್ದಾರಿಯಲ್ಲಿ ಟ್ರಕ್ ಹಿಂಭಾಗಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು!
- ವಿಟ್ಲ ಲಯನ್ಸ್ ಕ್ಲಬ್ ಮತ್ತು ಲಿಯೊ ಕ್ಲಬ್ ಇದರ 2026-27 ನೇ ಸಾಲಿನ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಪದಗ್ರಹಣ ಸಮಾರಂಭ&ಸ್ಥಾಪಕ ದಿನಾಚರಣೆ



- Advertisement -








