- Advertisement -
- Advertisement -


ಮಂಗಳೂರು: ಬೈಕಂಪಾಡಿಯ ಮೀನಕಳಿಯಲ್ಲಿ ರೌಡಿಶೀಟರ್ ಟ್ಯಾಟೂ ರಾಜಾ ಅಲಿಯಾಸ್ ರಾಘವೇಂದ್ರ ಕೊಲೆ ಪ್ರಕರಣದ ಪ್ರಮುಖ ಆರೋಪಿ ನವೀನ್ ಯಾನೆ ಮೈಕಲ್ ನವೀನನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈಗ ಬಂಧಿಸಿದ ಆರೋಪಿಗಳ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ.
ಮೈಕಲ್ ನವೀನ್ ಎಂಬಾತನ ಮೇಲೆ ಈಗಾಗಲೇ ಮೂರು ಕೊಲೆ ಪ್ರಕರಣ ಸೇರಿದಂತೆ ಒಟ್ಟು 8 ಕ್ರಿಮಿನಲ್ ಕೇಸುಗಳಿವೆ. ಟ್ಯಾಟೂ ರಾಜಾನ ಕೊಲೆಗೆ ಪ್ರಮುಖ ಸಂಚು ರೂಪಿಸಿ ಮಾರಕಾಯುಧಗಳೊಂದಿಗೆ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ರಾಜಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೆ 12 ಮಂದಿಯನ್ನು ಬಂಧಿಸಲಾಗಿದೆ.
ಇದಕ್ಕೂ ಮುಂಚೆ ಎರಡು ಆರೋಪಿಗಳನ ಮೂಲಕ ಮೂಲ್ಕಿ ಎಂಬಲ್ಲಿ ಇತರರನ್ನು ಬಂಧಿಸಲು ಹೋದಾಗ ಆರೋಪಿಗಳನ್ನು ಪೊಲೀಸರ ಮೇಲೆ ಹಲ್ಲೆಗೈದು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಗಳ ಮೇಲೆ ಫೈರಿಂಗ್ ಮಾಡಿದ್ದರು.
- ನೇರಳಕಟ್ಟೆ: ಶ್ರೀ ಗಣೇಶ ಸಭಾಭವನದಲ್ಲಿ ಭಾರತ್ ಮಾತಾ ಪೂಜನಾ ಹಾಗೂ ಯೋಗ ಸಮವಸ್ತ್ರ ವಿತರಣೆ
- ಕನ್ಯಾನ ಸರ್ಕಾರಿ ಪದವಿ ಕಾಲೇಜಿನಲ್ಲಿ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಶ್ರಮದಾನ
- ವಿಟ್ಲ: ವಿನೂತನ ಯುವಕ ಮಂಡಲ (ರಿ)- ಬೆಳ್ಳಿ ಹಬ್ಬದ ಸಂಭ್ರಮಾಚರಣೆಯ ಅಂಗವಾಗಿ ವಿನೂತನ ಕೃಷಿ ವಿಕಾಸ
- ಶ್ರೀ ಗಣೇಶೋತ್ಸವ ಸಮಿತಿ ಕೆಲಿಂಜ ವತಿಯಿಂದ 50ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಬಂಗಾರ್ದ ಪರ್ಬ- ಅಂಗವಾಗಿ ಶ್ರೀ ಮಹಾಗಣಪತಿ ದೇವರಿಗೆ ಬೆಳ್ಳಿಯ ಕಿರೀಟ ಸಮರ್ಪಣೆ-ಭವ್ಯ ವಾಹನ ಜಾಥಾ
- ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ಸಭೆ: ರೈತ ಮೋರ್ಚಾ ನೂತನ ಅಧ್ಯಕ್ಷರಾಗಿ ಉಮೇಶ್ ಶೆಟ್ಟಿ ತರ್ಯಾಡ್ಕ ಆಯ್ಕೆ


- Advertisement -








