Monday, September 21, 2026
spot_imgspot_img
spot_imgspot_img

ಕಾಸರಗೋಡು: ಹಲವಾರು ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯ ಬಂಧನ..!

- Advertisement -
- Advertisement -

ಕಾಸರಗೋಡು: ಹಲವಾರು ಪ್ರಕರಣಗಳ ಆರೋಪಿಯೋರ್ವನನ್ನು ಕಾಫಾ ಕಾಯ್ದೆಯಂತೆ ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಮಂಜೇಶ್ವರ ಮೀಯಪದವಿನ ಅಬ್ದುಲ್ ರಹೀಮ್ (35) ಎಂದು ಗುರುತಿಸಲಾಗಿದೆ.

ಕೇರಳ ಹಾಗೂ ಕರ್ನಾಟಕದಲ್ಲಿ ಈತನ ವಿರುದ್ಧ 15ಕ್ಕೂ ಅಧಿಕ ಪ್ರಕರಣಗಳು ಈತನ ಮೇಲಿದ್ದು, ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ಕಣ್ಣೂರು ಸೆಂಟ್ರಲ್ ಜೈಲ್ ನಲ್ಲಿರುವ ಈತನ ವಿರುದ್ಧ ಕಾಫಾ ಕಾಯ್ದೆಯನ್ನು ಹೂಡಲಾಗಿದೆ. ಒಂದು ವರ್ಷದ ಹಿಂದೆ ರಹೀಮ್ ನೇತೃತ್ವದ ತಂಡವನ್ನು ಮೀಯಪದವು ಸಮೀಪ ಬಂಧಿಸಲು ಮುಂದಾಗಿದ್ದಾಗ ಗುಂಡಿನ ದಾಳಿ ನಡೆಸಿ ಬಳಿಕ ಬಿಯರ್ ಬಾಟ್ಲಿಗಳನ್ನು ಎಸೆದು ಪರಾರಿಯಾಗಿದ್ದು, ಬಳಿಕ ವಿಟ್ಲ ಬಳಿಯಿಂದ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ಈತನ ವಿರುದ್ಧ ನಕಲಿ ನೋಟು, ಕೊಲೆ ಯತ್ನ, ಕಾರು ಹಾಗೂ ನಗದು ದರೋಡೆ, ಮಾದಕ ವಸ್ತು ಸಾಗಾಟ, ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮೊದಲಾದ ಪ್ರಕರಣಗಳು ಈತನ ಮೇಲಿದೆ.

- Advertisement -

Related news

error: Content is protected !!