

ಯುವಶಕ್ತಿ ಮತ್ತು ಅನುಭವಿಗಳ ಸಮ್ಮಿಲನದ ಮೂಲಕ ಭಾರತೀಯ ಸೇನೆಗೆ ‘ಬಲ’ ತುಂಬಬಲ್ಲ ಯೋಜನೆ ಅಗ್ನಿಪಥ್. ಆದರೆ ಇದನ್ನು ಜಾರಿಗೊಳಿಸುವ ಮೊದಲೇ ಸಮರ್ಪಕ ಮಾಹಿತಿ ನೀಡುವಲ್ಲಿ ಸೇನೆ ಮತ್ತು ಸರ್ಕಾರ ಎಡವಿರುವುದರಿಂದ ಗೊಂದಲ ಸೃಷ್ಟಿಯಾಗಿ ಗಲಾಟೆಗಳಾಗಿವೆ ಎಂದು ದಕ್ಷಿಣ ಕನ್ನಡ ಮಾಜಿ ಸೈನಿಕರ ಸಂಘ ಅಭಿಪ್ರಾಯಪಟ್ಟಿದೆ.
‘ಭಾರತ ಸೇನೆಗೆ ಸಂಬಂಧಿಸಿ ಇದು ಕ್ರಾಂತಿಕಾರಿ ಯೋಜನೆ. ಆದರೆ ಇದರ ಜಾರಿಯ ಬಗ್ಗೆ ಘೋಷಿಸುವಾಗ ಸಣ್ಣ ಸಣ್ಣ ಮಾಹಿತಿಗಳನ್ನು ಬದಿಗಿರಿಸಿ ಪ್ರಮುಖ ಅಂಶಗಳನ್ನಷ್ಟೇ ಬಹಿರಂಗ ಮಾಡಿದ್ದಾರೆ. ಇದರಿಂದಾಗಿ ಯೋಜನೆಯ ಸೂಕ್ಷ್ಮಗಳು ಹಿನ್ನೆಲೆಗೆ ಸರಿದಿವೆ. ಇದನ್ನು ದುರುಪಯೋಗಪಡಿಸಿಕೊಳ್ಳಲು ಕೆಲವು ದುಷ್ಟ ಶಕ್ತಿಗಳು ಪ್ರಯತ್ನಿಸಿದ್ದರಿಂದಾಗಿ ದೇಶದ ವಿವಿಧ ಕಡೆಗಳಲ್ಲಿ ಬೆಂಕಿ ಹತ್ತಿಕೊಂಡಿತು’ ಎಂದು ಸಂಘದ ಪೋಷಕ ನಿವೃತ್ತ ಕರ್ನಲ್ ಶರತ್ ಭಂಡಾರಿ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು 1999ರಲ್ಲಿ ಕಾರ್ಗಿಲ್ ಯುದ್ಧದ ಸಂದರ್ಭದಲ್ಲೇ ಯುವಕರು ಸೇನೆಗೆ ನೇಮಕಗೊಂಡರೆ ಒಳ್ಳೆಯದು ಎಂಬ ಅಭಿಪ್ರಾಯ ಮೂಡಿತ್ತು. ಅಂದು ಪ್ರಾಣಹಾನಿ ಸಂಭವಿಸಿದ್ದಕ್ಕೆ ಸೈನಿಕರ ಪ್ರಾಯವೂ ಪ್ರಮುಖ ಕಾರಣವಾಗಿತ್ತು ಎಂದು ಹೇಳಿದರು. ‘ಪೂರ್ಣಪ್ರಮಾಣದ ಸೈನಿಕನೊಬ್ಬ ತಯಾರಾಗಬೇಕಾದರೆ 6 ರಿಂದ 7 ವರ್ಷಗಳ ತರಬೇತಿಬೇಕು. ಆ ಅವಧಿಯನ್ನು 4 ಅಥವಾ ಅದಕ್ಕಿಂತ ಕಡಿಮೆ ವರ್ಷಗಳಿಗೆ ಇಳಿಸುವ ಸಂಬಂಧ ಅಧ್ಯಯನಗಳು ನಡೆಯುತ್ತಿವೆ.
‘ಅಗ್ನಿಪಥ’ವು ಇದಕ್ಕೆ ಪುಷ್ಠಿ ನೀಡಲಿದೆ. ಸಣ್ಣ ವಯಸ್ಸಿನಲ್ಲಿ 4 ವರ್ಷಗಳ ಸೇವೆ ಮುಗಿಸಿ ಹೊರಬರುವ ಯೋಧರು ಪದವಿ ಶಿಕ್ಷಣ ಮುಂದುವರಿಸುವುದಕ್ಕೆ ಅಥವಾ ಉದ್ಯೋಗಗಳಿಸುವುದಕ್ಕೆ ಅವಕಾಶವಿದೆ. ಆರ್ಥಿಕವಾಗಿ ಸದೃಢರಾಗುವುದರಿಂದ ಸಣ್ಣ ಉದ್ಯಮ ಅರಂಭಿಸುವುದಕ್ಕೂ ಸಾಧ್ಯವಾಗಲಿದೆ’ ಎಂದು ಅವರು ಅಭಿಪ್ರಾಯಪಟ್ಟರು. ‘ಅಗ್ನಿಪಥ ಉದ್ಯೋಗ ಯೋಜನೆಯಲ್ಲ. ಅದೊಂದು ತರಬೇತಿ ಕಾರ್ಯಕ್ರಮ. ಇದನ್ನು ತಿಳಿಯದೆ ಯುವಜನರನ್ನು ಕೆಲವರು ದಾರಿ ತಪ್ಪಿಸುತ್ತಿದ್ದಾರೆ. ಅಷ್ಟಕ್ಕೂ ದೇಶದ ವಿವಿಧ ಕಡೆಗಳಲ್ಲಿ ಬೆಂಕಿ ಹಚ್ಚಿದವರು ಯಾರೂ ಸೇನೆಗೆ ಸೇರುವ ಆಸಕ್ತಿ ಇರುವವರು ಅಲ್ಲ. ಅಂಥವರು ಸೇನೆಗೆ ಸೇರುವ ಅಗತ್ಯ ವೂ ಇಲ್ಲ’ ಎಂದು ಅವರು ಹೇಳಿದರು.
- ಅಸ್ಸಾಂನ ಜೋರ್ಹತ್ನಲ್ಲಿ ಭಾರತೀಯ ವಾಯುಪಡೆಯ AN-32 ವಿಮಾನ ಪತನ; ಐವರು IAF ಸಿಬ್ಬಂದಿ ದುರ್ಮರಣ
- ವಿಟ್ಲ ಪಿ ಎಂ ಶ್ರೀ ಸರಕಾರಿ ಪ್ರೌಢಶಾಲೆ RMSA ವಿಟ್ಲದಲ್ಲಿ ’ಇಳಾ’ ರಾಷ್ಟ್ರೀಯ ಹಸಿರು ಪಡೆ ಕಾರ್ಯಕ್ರಮ
- ಪಿ ಎಂ ಶ್ರೀ ಸರಕಾರಿ ಪ್ರೌಢಶಾಲೆಯಲ್ಲಿ ವಿಟ್ಲ ಪೊಲೀಸ್ ಠಾಣಾ ವತಿಯಿಂದ ಮಾದಕ ವಸ್ತು ಮತ್ತು ಪೋಕ್ಸೋ ಅರಿವು ಮಾಹಿತಿ ಕಾರ್ಯಕ್ರಮ
- ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317d ವತಿಯಿಂದ ಸಮಾಜದ ಬಡ ಮಕ್ಕಳ ಶಿಕ್ಷಣ ಮತ್ತು ಆಹಾರ ಅವಶ್ಯಕತೆಗಳ ಪೂರೈಕೆ ಕಾರ್ಯಕ್ರಮ
- ಪುತ್ತೂರು:10 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ









