- Advertisement -
- Advertisement -


ವಿಟ್ಲ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ರಸ್ತೆ ಜಲಾವೃತವಾದ ಘಟನೆ ನಡೆದಿದೆ. ನೀರಿನ ಮಟ್ಟ ಏರಿಕೆಯಾಗುತ್ತಿರು ಹಿನ್ನೆಲೆಯಲ್ಲಿ ವಾಹನ ಸಂಚಾರ ಸ್ಥಗಿತವಾಗಿದೆ.

ವಿಟ್ಲ-ಸಾಲೆತ್ತೂರು ರಸ್ತೆಯ ಕೊಳ್ನಾಡು ಗ್ರಾಮದ ಕುಡ್ತಮುಗೇರು ಎಂಬಲ್ಲಿ ರಸ್ತೆ ಬದಿಯಲ್ಲಿ ಹರಿಯುತ್ತಿರುವ ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ರಸ್ತೆ ಜಲಾವೃತವಾಗಿದೆ. ಇದರಿಂದಾಗಿ ಈ ದಾರಿಯಾಗಿ ವಾಹನ ಸಂಚಾರಕ್ಕೆ ತೊಡಕಾಗಿದ್ದು, ವಾಹನಗಳು ಸುತ್ತಿ ಬಳಸಿ ಪ್ರಯಾಣ ಬೆಳೆಸುವಂತಾಗಿದೆ.

ಬೆಳಗ್ಗಿನಿಂದಲೇ ನೀರಿನ ಮಟ್ಟ ಏರುತ್ತಿದ್ದು, ಅಲ್ಪ ಹೊತ್ತು ಇಳಿಮುಖವಾಗಿತ್ತು. ಇದೀಗ ಮತ್ತೆ ಏರಿಕೆ ಕಂಡಿದ್ದು ನೀರು ರಸ್ತೆಗೆ ಬಂದಿದೆ. ಇದೀಗ ರಸ್ತೆಯ ಎರಡೂ ಕಡೆಗಳಲ್ಲಿ ಸ್ಥಳೀಯ ನಾಗರೀಕರು ಕಾವಲು ಕಾಯುತ್ತಿದ್ದು ಅಪಾಯ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
- ಐಸಿಸ್ಗೆ ಯುವಕರನ್ನು ಸೇರಿಸಲು ಹಣ ಸಂದಾಯ ಆರೋಪ – ಬೆಂಗಳೂರಲ್ಲಿ ಮುಸ್ಲಿಂ ಸಂಘಟನೆ ಮೇಲೆ ಇಡಿ ದಾಳಿ
- ಬೆಂಗಳೂರು: ಶಿವಾಜಿನಗರದಲ್ಲಿ ಫುಟ್ಪಾತ್ ತೆರವು ವೇಳೆ ಜಿಬಿಎ ಅಧಿಕಾರಿಗಳ ಮೇಲೆ ಭೀಕರ ಹಲ್ಲೆ
- ಮೈಸೂರು: ಹೆಂಡತಿ, ಇಬ್ಬರು ಮಕ್ಕಳನ್ನು ಹತ್ಯೆಗೈದು ತಂದೆಯೂ ಆತ್ಮಹತ್ಯೆ..!
- ಬೆಂಗಳೂರು: ವಾಟ್ಸಪ್ಗೆ ಬಂತು ಮದುವೆ ಆಹ್ವಾನ – ಲಿಂಕ್ ಓಪನ್ ಮಾಡಿದ ಕೂಡಲೇ 9 ಲಕ್ಷ ಮಾಯ
- ಸಿಕ್ಕಿಂ: ನಿರ್ಮಾಣ ಹಂತದ ಸುರಂಗ ಕುಸಿತ – ಏಳು ಮಂದಿ ಸಾವು, ಹಲವರು ಸಿಲುಕಿರುವ ಶಂಕೆ



- Advertisement -








