Friday, June 26, 2026
spot_imgspot_img
spot_imgspot_img

ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಪಲ್ಟಿಯಾದ ಕಾರು; ಇಬ್ಬರು ಸಾವು

- Advertisement -
- Advertisement -

ಬೆಳಗಾವಿ: ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ಕಾರು ಪಲ್ಟಿಯಾಗಿದ್ದು ಇಬ್ಬರು ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ರಡ್ಡೇರಹಟ್ಟಿ ಬಳಿ ನಡೆದಿದೆ. ಮಹಾದೇವ ಚಿಗರಿ(26), ಸುರೇಶ್ ಬಡಚಿ(27) ಮೃತರು.

MH 05 AB 6674 ನಂಬರ್ನ ಕಾರಿನಲ್ಲಿ ಮೂವರು ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನ ನಿಯಂತ್ರಣತಪ್ಪಿ ಹಲ್ಯಾಳ ಏತ ನೀರಾವರಿ ಕಾಲುವೆಗೆ ಕಾರು ಪಲ್ಟಿಯಾಗಿದೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಮೃತಪಟ್ಟಿದ್ದು ಶ್ರೀಕಾಂತ್ ನಡುವಿನಮನಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಅಥಣಿ ಅಗ್ನಿಶಾಮಕ ದಳ ಹಾಗೂ ಪೊಲೀಸರು ಬಂದು ಕಾರ್ಯಾಚರಣೆ ನಡೆಸಿ ಕಾರನ್ನು ಕಾಲುವೆಯಿಂದ ಮೇಲೆತ್ತಿದ್ದಾರೆ. ಕೃಷ್ಣಾ ನದಿ ನೀರು ಹೆಚ್ಚಾಗಿ ಹರಿಯುವ ಹಿನ್ನೆಲೆ ಕಾಲುವೆಗೆ ಅಪಾರ ಪ್ರಮಾಣದ ನೀರು ಬಿಡುಗಡೆಯಾಗಿದೆ. ಘಟನೆಯಲ್ಲಿ ಚಾಲಕನ ನಿರ್ಲಕ್ಷವೇ ಕಾರಣ ಎಂದು ತಿಳಿದುಬಂದಿದೆ. ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

- Advertisement -

Related news

error: Content is protected !!