Friday, June 5, 2026
spot_imgspot_img
spot_imgspot_img

ವಿಟ್ಲ: ವಿಪರೀತ ಮಳೆಯಿಂದಾಗಿ ಕೊಚ್ಚಿಹೋದ ಕಾಲು ಸೇತುವೆ..! ಪರಿಸ್ಥಿತಿ ಅವಲೋಕನ

- Advertisement -
- Advertisement -

ವಿಟ್ಲ: ನಿರಂತರ ಸುರಿದ ಭಾರೀ ಮಳೆಗೆ ಅಲ್ಲಲ್ಲಿ ಅವಘಡಗಳು ಸಂಭವಿಸಿದೆ. ಕೊಳ್ನಾಡು ಗ್ರಾಮದ ಕಾಡುಮಠ ಬಸ್ತಿಮೂಲೆ ಎಂಬಲ್ಲಿ ನೀರಿನ ರಭಸಕ್ಕೆ ಕಾಲು ಸಂಕ ಕೊಚ್ಚಿ ಹೋಗಿದೆ. ಕುಳಾಲು, ಕುದ್ರಿಯ, ಪಾದೆಕರಿಯ ಪ್ರದೇಶಗಳಿಂದ ಬರುವ ಕಾಲು ಸೇತುವೆ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ.

ಘಟನಾ ಸ್ಥಳಕ್ಕೆ ಕೊಳ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋಹಿಣಿ, ಗ್ರಾಮ ಕರಣಿಕ ಮನೋಹರ್ ಹಾಗೂ ಸ್ಥಳೀಯ ಪಂಚಾಯತ್ ಸದಸ್ಯರು ವೀಕ್ಷಣೆ ಮಾಡಿ ತಾತ್ಕಾಲಿಕ ಪರಿಹಾರಕ್ಕೆ ವ್ಯವಸ್ಥೆ ಮಾಡುವಂತೆ ಭರವಸೆ ನೀಡಿದ್ದಾರೆ.

- Advertisement -

Related news

error: Content is protected !!