


ದಿನಾಂಕ 21.06.2025 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅ.ಕ್ರ:73/2025 ಕಲಂ: 125 ಬಿ.ಎನ್.ಎಸ್ ಪ್ರಕರಣಕ್ಕೆ ಸಂಬಂಧಿಸಿದಂತೆ, https://dtvkannada.in/archives/ 14840 D TV ಕನ್ನಡ ಎಂಬ ನ್ಯೂಸ್ ಚಾನೆಲ್ ಲಿಂಕ್ ನಲ್ಲಿ “ದ.ಕ ಜಿಲ್ಲೆಯಲ್ಲಿ ಮತ್ತೆ ಮುಂದುವರಿದ ತಳವಾರ ದಾಳಿ, ಸಜೀಪದಲ್ಲಿ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಇಬ್ಬರು ಅಮಾಯಕ ಮುಸ್ಲಿಮರ ಮೇಲೆ ದಾಳಿ” ಎಂಬ ತಲೆಬರಹವಿರುವ ನ್ಯೂಸ್ ಲಿಂಕ್ ಮೂಲಕ ಸುಳ್ಳು ಮಾಹಿತಿಯನ್ನು ಪ್ರಸಾರ ಮಾಡಿರುವುದು ಕಂಡುಬಂದಿದ್ದು, ಈ ಸುಳ್ಳು ಸುದ್ದಿಯನ್ನು ಪ್ರಸಾರದಿಂದ ಸಾರ್ವಜನಿಕರಿಗೆ ಭಯ ಬೀತಿಯನ್ನುಂಟು ಮಾಡಿ, ಸಾರ್ವಜನಿಕ ನೆಮ್ಮದಿಯ ವಿರುದ್ಧ ಅಪರಾಧವೆಸಗಿದ ಡಿ ಟಿವಿ ಕನ್ನಡ ನ್ಯೂಸ್ ಚಾನೆಲ್ ನ ವಿರುದ್ದ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಅ ಕ್ರ 75/2025, ಕಲಂ: 240 ಬಿ.ಎನ್.ಎಸ್. ದಾಖಲಿಸಿಕೊಂಡು ನಡೆಸಲಾಗುತ್ತಿದ್ದು, ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು.
ಪ್ರಕರಣಕ್ಕೆ ಸಂಬಂಧಿಸಿದಂತೆ, ಮುಹಮ್ಮದ್ ನೌಶಾದ್ ಎಂಬ ಹೆಸರಿನ ಪೇಸ್ಬುಕ್ ಖಾತೆಯಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಾರೆ, ಸದ್ರಿ ಪೇಸ್ಬುಕ್ ಖಾತೆಯ ವಿರುದ್ಧ ಮಾನ್ಯ ನ್ಯಾಯಾಲಯದಿಂದ ಅನುಮತಿ ಪಡೆದು ಬಂಟ್ವಾಳ ಗ್ರಾಮಾಂತರ ಠಾಣೆ 76/2025, ಕಲಂ: 240 ಬಿಎನ್ಎಸ್ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆಯಾಗುತ್ತಿದೆ, ಮುಂದಿನ ಕಾನೂನುಕ್ರಮ ನಡೆಸಲಾಗುವುದು.








