Tuesday, July 28, 2026
spot_imgspot_img
spot_imgspot_img

ಮದುವೆ ಆರತಕ್ಷತೆ ವೇಳೆ ಕುಸಿದು ಬಿದ್ದು ವರ ಸಾವು

- Advertisement -
- Advertisement -

ವಿಜಯನಗರ: ಆರತಕ್ಷತೆ ವೇಳೆ ಕುಸಿದು ಬಿದ್ದು ವರ ಸಾವನ್ನಪ್ಪಿರುವ ಘಟನೆ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹೊನ್ನೂರ ಸ್ವಾಮಿ(26) ಮೃತ ಯುವಕ.

ನಿನ್ನೆ ಸಂಜೆ ಹೊನ್ನೂರ ಸ್ವಾಮಿ ಅವರ ಮದುವೆ ಆರತಕ್ಷತೆ ನಡೆಯುತ್ತಿತ್ತು. ಈ ವೇಳೆ ಎದೆ ನೋವಿನಿಂದ ಕುಸಿದು ಬಿದ್ದು ಅಸ್ವಸ್ಥಗೊಂಡ ಹೊನ್ನೂರ ಸ್ವಾಮಿ ಅವರನ್ನ ಕೂಡಲೇ ಸಮೀಪದ ಖಾಸಗಿ ಕ್ಲಿನಿಕ್‌ಗೆ ಕರೆದೊಯ್ಯಲಾಗಿತ್ತು. ಹೆಚ್ಚಿನ ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮದುಮಗ ಕೊನೆಯುಸಿರೆಳೆದಿದ್ದಾನೆ. ಹೃದಯಾಘಾತದಿಂದ ಯುವ ಸಾವನ್ನಪ್ಪಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.

ವರನ ಮನೆಯಲ್ಲಿ ಕುಟುಂಬಸ್ಥರ ರೋಧನ ಮುಗಿಲು ಮುಟ್ಟಿದ್ದು, ಮನೆಯಲ್ಲಿ ಸೂತಕದ ಛಾಯೆ ಮೂಡಿದೆ.

- Advertisement -

Related news

error: Content is protected !!