Tuesday, September 15, 2026
spot_imgspot_img
spot_imgspot_img

ಕುಂದಾಪುರ: ಅಕ್ರಮವಾಗಿ ಸಂಗ್ರಹಿಸಿಟ್ಟಿದ 80 ಕ್ವಿಂಟಾಲ್ ಪಡಿತರ ಅಕ್ಕಿ ವಶಕ್ಕೆ

- Advertisement -
- Advertisement -

ಕುಂದಾಪುರ: ಅಕ್ರಮವಾಗಿ ಸಂಗ್ರಹಿಸಿಟ್ಟಿದ 80 ಕ್ವಿಂಟಾಲ್ ಪಡಿತರ ಅಕ್ಕಿಯನ್ನು ಶಿರೂರು ಗ್ರಾಮದ ಹಡವಿನಕೋಣಿಯ ಗೋದಾಮಿನಲ್ಲಿ ವಶಕ್ಕೆ ಪಡೆಯಲಾಗಿದೆ.

ಖಾಜಿ ಹಸನ್ ಗೆ ಸೇರಿದ ಗ್ರೀನ್ ವಿವ್ ಕಾಂಪೌಂಡ್‌ನಲ್ಲಿ ತಲಾ 50 ಕೆ.ಜಿ ಬೆಳ್ತಿಗೆ ಅಕ್ಕಿ ಇರುವ ಒಟ್ಟು 160 ಚೀಲಗಳು ಇದ್ದವು. ಅಕ್ಕಿಯ ಮೌಲ್ಯ 1,92 ಲಕ್ಷ ರೂ. ಗೋದಾಮಿನಲ್ಲಿದ್ದ 160 ಅಕ್ಕಿ ಚೀಲ, 10 ಖಾಲಿ ಗೋಣಿ ಚೀಲ ಸ್ವಾಧೀನಪಡಿಸಿಕೊಂಡಿದ್ದು, ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆಹಾರ ನಿರೀಕ್ಷಕ ವಿನಯ ಕುಮಾರ್, ಶಿರೂರು ಗ್ರಾಮ ಲೆಕ್ಕಿಗ ಪ್ರಕಾಶ್ ರಾಠೋಡ್ ಬೈಂದೂರು ಪೊಲೀಸರ ಸಹಕಾರದಲ್ಲಿ ಈ ಕಾರ್ಯಾಚರಣೆ ನಡೆಯಿತು.

- Advertisement -

Related news

error: Content is protected !!