Sunday, September 13, 2026
spot_imgspot_img
spot_imgspot_img

ಮಂಗಳೂರು: ಏರ್ ಪೋರ್ಟ್ ನಲ್ಲಿ ಆತಂಕ ಸೃಷ್ಟಿಸಿದ ಯುವಕ-ಯುವತಿಯ ವಾಟ್ಸಾಪ್ ಚಾಟ್..!

- Advertisement -
- Advertisement -

ಮಂಗಳೂರು: ಮಂಗಳೂರು ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಲ್ಲಿ ಯುವಕ ಮತ್ತು ಯುವತಿ ನಡೆಸಿದ ವಾಟ್ಸಪ್ ಚಾಟಿಂಗ್ ಆತಂಕ ತಂದಿಟ್ಟ ಘಟನೆ ನಡೆದಿದೆ.

ಇದರಿಂದಾಗಿ ರನ್ ವೇನಲ್ಲಿ ಟೇಕಾಫ್ ಗೆ ರೆಡಿಯಾಗಿದ್ದ ವಿಮಾನವನ್ನು ತಡೆದು ತಪಾಸಣೆ ಮಾಡಲಾಗಿದ್ದು, ಏರ್ ಪೋರ್ಟ್ ನಲ್ಲಿ ಕೆಲವು ಹೊತ್ತು ಆತಂಕಕ್ಕೆ ಕಾರಣವಾಗಿತ್ತು.

ಮಂಗಳೂರು ಏರ್ ಪೋರ್ಟ್ ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಯುವತಿ ಮತ್ತು ಮುಂಬೈಗೆ ತೆರಳುತ್ತಿದ್ದ ಯುವಕ ಭದ್ರತೆ ಬಗ್ಗೆ ಆತಂಕ ಹುಟ್ಟಿಸುವ ರೀತಿಯಲ್ಲಿ ವಾಟ್ಸಪ್ ಚಾಟ್ ನಡೆಸಿದ್ದರು.

ಯುವಕ ಮತ್ತು ಯುವತಿ ಇಬ್ಬರೂ ಪರಿಚಯಸ್ಥರೇ ಆಗಿದ್ದು, ಮುಂಬೈನತ್ತ ಟೇಕಾಫ್ ಆಗಬೇಕಿದ್ದ ವಿಮಾನದಲ್ಲಿದ್ದ ಯುವಕ ಮತ್ತು ಬೆಂಗಳೂರಿಗೆ ತೆರಳಲು ಏರ್ ಪೋರ್ಟ್ ನಲ್ಲಿ ಕುಳಿತಿದ್ದ ಯುವತಿ ಭದ್ರತೆಗೆ ಅಪಾಯಕಾರಿಯಾಗುವ ವಿಚಾರಗಳ ಉಲ್ಲೇಖವಿರುವ ಚಾಟಿಂಗ್ ನಡೆಸಿದ್ದರು. ಯುವತಿಯ ವಾಟ್ಸಪ್ ಚಾಟಿಂಗ್ ಗಮನಿಸಿ ಏರ್ ಪೋರ್ಟ್ ಲಾಂಜ್ ನಲ್ಲಿ ಪ್ರಯಾಣಿಕರೊಬ್ಬರು ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ಮಾಹಿತಿ ಹಿನ್ನೆಲೆಯಲ್ಲಿ ಮುಂಬೈಗೆ ಟೇಕಾಫ್ ಆಗಬೇಕಿದ್ದ ವಿಮಾನ ಹಾರಾಟ ತಡೆದು ಪ್ರಯಾಣಿಕರನ್ನು ಇಳಿಸಿ ತಪಾಸಣೆ ನಡೆಸಲಾಗಿದೆ. ಬಳಿಕ ಯುವಕ ಮತ್ತು ಯುವತಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ವಿಚಾರಣೆ ವೇಳೆ ತಮಾಷೆಗಾಗಿ ಆ ರೀತಿ ಚಾಟಿಂಗ್ ಮಾಡಿದ್ದಾಗಿ ಯುವಕ ಮತ್ತು ಯುವತಿ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

- Advertisement -

Related news

error: Content is protected !!