Monday, July 27, 2026
spot_imgspot_img
spot_imgspot_img

ವಿಟ್ಲ: ಜೇಸಿ ಶಾಲಾ ವಿದ್ಯಾರ್ಥಿ ಮೋನಿಷ್ ಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

- Advertisement -
- Advertisement -

ವಿಟ್ಲ: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ಸಾಂಸ್ಕೃತಿಕ ಪರಿಷತ್ ಸೃಷ್ಟಿ ಶಕ್ತಿ ಸಂಸ್ಥೆಯ ವತಿಯಿಂದ ನೀಡುವ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಠ್ಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಮೋನಿಷ್ ರವರು ಪಡೆದಿದ್ದಾರೆ.

“ಎಲ್ಲ ಬಲ್ಲವರಿಲ್ಲ|ಬಲ್ಲವರು ಬಹಳಿಲ್ಲ| ಬಲ್ಲಿದರು ಇದ್ದು ಬಲವಿಲ್ಲ |ಸಾಹಿತ್ಯ ಎಲ್ಲರಿಗೆ ಇಲ್ಲ ಸರ್ವಜ್ಞ ” ಈ ವಚನದಂತೆ ಕಲಾ ಮಾತೆ ಎಲ್ಲರೀಗೂ ಒಲಿಯುವುದಿಲ್ಲ. ಪ್ರಯತ್ನದಿಂದ ಸಾಧಿಸಬಹುದಾದ, ಕರಗತ ಮಾಡಿಕೊಳ್ಳಬಹುದಾದ ಅದ್ಭುತವಾದ ಸಾಂಸ್ಕೃತಿಕ ಕ್ಷೇತ್ರ ಜೇಸಿ ಶಾಲಾ ವಿದ್ಯಾರ್ಥಿ ಮಾಸ್ಟರ್ ಮೋನಿಷ್ ಗೆ ಒಲಿದಿರುವುದು ಸಂಸ್ಥೆಗೆ ಹೆಮ್ಮೆ ತಂದಿದೆ ಎಂದು ಶಾಲಾ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.

astr

ಇವರನ್ನು ವಿಠಲ್ ಜೇಸಿ ಆಂಗ್ಲ ಮಾಧ್ಯಮ ಶಾಲಾ ಆಡಳಿತ ಮಂಡಳಿ, ಆಡಳಿತಾಧಿಕಾರಿ, ಪ್ರಾಂಶುಪಾಲರು, ಶಿಕ್ಷಕ ವರ್ಗ ಹಾಗೂ ಶಿಕ್ಷಕೇತರ ವರ್ಗ ಅಭಿನಂದಿಸಿದೆ. ಇನ್ನಷ್ಟು ಅವಕಾಶಗಳು ದೊರಕಲಿ ಎಂದು ಹಾರೈಸಿದೆ.

- Advertisement -

Related news

error: Content is protected !!