Sunday, September 13, 2026
spot_imgspot_img
spot_imgspot_img

ಮಂಜೇಶ್ವರ: ಕಾರಿನಲ್ಲಿ ಎಂಡಿಎಂಎ ಮಾದಕ ವಸ್ತು ಸಾಗಾಟ; ಇಬ್ಬರ ಬಂಧನ

- Advertisement -
- Advertisement -

ಮಂಜೇಶ್ವರ: ಕಾರಿನಲ್ಲಿ ಸಾಗಾಟ ಮಾಡಲಾಗುತ್ತಿದ್ದ 5.7 ಗ್ರಾಂ ಎಂಡಿಎಂಎ ಮಾದಕ ವಸ್ತು ಸಹಿತ ಇಬ್ಬರನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಧರ್ಮತ್ತಡ್ಕದ ಆಸಿಬ್(30) ಮತ್ತು ಕುನಿಯದ ಶಮೀರ್(32) ಬಂಧಿತರು. ಗುರುವಾರ ರಾತ್ರಿ ಮಂಗಳೂರು ಕಡೆಯಿಂದ ಉಪ್ಪಳದತ್ತ ಬರುತ್ತಿದ್ದ ಕಾರನ್ನು ತಡೆದು ತಪಾಸಣೆ ನಡೆಸಲು ಮುಂದಾದಾಗ ಮಾದಕ ವಸ್ತುವನ್ನು ಒಳಗೊಂಡ ಪೊಟ್ಟಣವನ್ನು ರಸ್ತೆಗೆ ಎಸೆದು ಇಬ್ಬರು ಕಾರು ಸಹಿತ ಪರಾರಿಯಾಗಲೆತ್ನಿಸಿದ್ದು, ಬೆನ್ನಟ್ಟಿದ ಪೊಲೀಸರು ಕಾರು ತಡೆದು ನಿಲ್ಲಿಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

- Advertisement -

Related news

error: Content is protected !!