Sunday, September 13, 2026
spot_imgspot_img
spot_imgspot_img

ಹಿಂದು ಸಾಮ್ರಾಟ್ ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮಿತ್ತೂರು ರಾಮ ಮಂದಿರಕ್ಕೆ ಭೇಟಿ; ಹಿಂದು ಕಾರ್ಯಕರ್ತರಿಂದ ಸನ್ಮಾನ

- Advertisement -
- Advertisement -

ಮಿತ್ತೂರು: ಹಿಂದು ಸಾಮ್ರಾಟ್ ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ರವರು ಇಂದು ಪುತ್ತೂರಿಗೆ ಆಗಮಿಸಿದ್ದು, ಹಿಂದು ಮುಖಂಡ ದಿ. ಪ್ರವೀಣ್ ನೆಟ್ಟಾರು ರವರ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು. ಬಳಿಕ ಇಡ್ಕಿದು ಗ್ರಾಮದ ಮಿತ್ತೂರು ರಾಮ ಮಂದಿರಕ್ಕೆ ಭೇಟಿ ನೀಡಿದ್ದಾರೆ.

ಮಿತ್ತೂರಿನಲ್ಲಿ ಹಿಂದು ಕಾರ್ಯಕರ್ತರು ಅವರನ್ನು ಸನ್ಮಾನಿಸಿದರು

ಈ ವೇಳೆ ವಿಶ್ವ ಹಿಂದು ಪರಿಷತ್ ಬಜರಂಗದಳ ಅಧ್ಯಕ್ಷರು ಮೋಹನ್ ಸೂರ್ಯ, ಹಿಂದು ಜಾಗರಣ ವೇದಿಕೆ ಅಧ್ಯಕ್ಷರು ನವೀನ್ ನೇರ್ಲಾಜೆ, ಇಡ್ಕಿದು ಪಂಚಾಯತ್ ಸದಸ್ಯರು ತಿಲಕ್ ರಾಜ್ ಶೆಟ್ಟಿ, ಸಂಜೀವ ಪೂಜಾರಿ ದರ್ಬೆ, ಇಡ್ಕಿದು ಸೇವಾ ಸಹಕಾರಿ ಬ್ಯಾಂಕಿನ ಮಾಜಿ ಅಧ್ಯಕ್ಷರು ಗೋಪಾಲಕೃಷ್ಣ ಭಟ್ ಬೈಪದವು, ಎಪಿಎಂಸಿ ಮಾಜಿ ಸದಸ್ಯರು ಜಗದೀಶ್ ದೇವಸ್ಯ ಹಾಗೂ ಎಲ್ಲ ಹಿಂದು ಕಾರ್ಯಕರ್ತರು ಉಪಸ್ಥಿತರಿದ್ದರು.

- Advertisement -

Related news

error: Content is protected !!