- Advertisement -
- Advertisement -
ಉಡುಪಿ: ದೇವಸ್ಥಾನದಲ್ಲಿ ಸರಗಳ್ಳತನ ಮಾಡಿದ್ದ ಕೋಟದಲ್ಲಿ ತಮಿಳುನಾಡು ಮೂಲದ ಸರಗಳ್ಳಿಯರ ಸೆರೆ ಹಿಡಿಯಲಾಗಿದೆ. ಗಾಯತ್ರಿ(40) ಕಾಳಿ(35) ಪೊಲೀಸ್ ವಶದಲ್ಲಿರುವ ಸರಗಳ್ಳಿಯರು. ಕೋಟ ಅಮೃತೇಶ್ವರಿ ದೇವಳದ ಆವರಣದಲ್ಲಿ ಘಟನೆ ನಡೆದಿದೆ.

ಭಕ್ತರ ಸೋಗಿನಲ್ಲಿ ದೇವಾಲಯಕ್ಕೆ ಬಂದಿದ್ದ ಸರಗಳ್ಳಿಯರು, ಭಕ್ತರೋಬ್ಬರ ಕೊರಳಿನಲ್ಲಿದ್ದ ಚಿನ್ನ ಸರಕ್ಕೆ ಕೈ ಹಾಕಿದ್ದರು. ಸರಗಳ್ಳಿಯರ ಕೈಚಳಕ ಗಮನಿಸಿ ಸ್ಥಳೀಯರು ಸೆರೆ ಹಿಡಿದಿದ್ದಾರೆ. ಕೋಟ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲು ಮಾಡಲಾಗಿದೆ.

- Advertisement -








