Thursday, July 30, 2026
spot_imgspot_img
spot_imgspot_img

ಶಾಸಕ ಹರೀಶ್ ಪೂಂಜಾರವರ ಮೇಲೆ ದಾಳಿಗೆ ಯತ್ನ ಪ್ರಕರಣ; ರಕ್ಷಣೆಗಾಗಿ ನೀಡಿದ್ದ ಗನ್ ಮ್ಯಾನ್ ನನ್ನು ವಾಪಾಸ್ ಕಳುಹಿಸಿದ ಶಾಸಕರು

- Advertisement -
- Advertisement -

ಮಂಗಳೂರು : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮೇಲೆ ದಾಳಿ ಯತ್ನ ನಡೆದಿತ್ತು, ಪ್ರಕರಣದ ಬಗ್ಗೆ ದ.ಕ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಹೇಳಿಕೆ ನೀಡಿದ್ದಾರೆ.

ಇದು ಕೊಲೆ ಯತ್ನ ಪ್ರಕರಣವಲ್ಲ, ಓವರ್ ಟೇಕ್ ಮಾಡುವ ಭರದಲ್ಲಿ ಮಾಡಿದಾಗ ನಡೆದ ಘಟನೆಯಾಗಿದೆ ಎಂದು ಹೇಳಿದ್ದಾರೆ.

ಸ್ಕಾರ್ಪಿಯೋ ಕಾರಿನಲ್ಲಿದ್ದ ರಿಯಾಜ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಬಳಿ ಯಾವುದೇ ಆಯುಧಗಳು ಪತ್ತೆಯಾಗಿಲ್ಲ. ಆರೋಪಿಯ ವಿರುದ್ಧ ಈ ಹಿಂದೆ ಯಾವುದೇ ಪ್ರಕರಣ ದಾಖಲಾಗಿಲ್ಲ. ಪ್ರಕರಣದ ಬಗ್ಗೆ ತನಿಖೆ ಮುಂದುವರಿಸುತ್ತೇವೆ ಎಂದು ದ.ಕ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನಾವಣೆ ಹೇಳಿಕೆ ನೀಡಿದ್ದಾರೆ.

ಆರೋಪಿ ತನ್ನ ಕಾರಿನ ಮೇಲೆ ತಲವಾರು ಝಳಪಿಸಿದ್ದ ಎಂದು ದೂರಿದ್ದ ಹರೀಶ್ ಪೂಂಜಾ. ಹರೀಶ್ ಪೂಂಜಾ ಕಾರು ಚಾಲಕ ನವೀನ್ ನೀಡಿದ್ದ ದೂರಿನ ಹಿನ್ನಲೆಯಲ್ಲಿ ಪ್ರಕರಣ ದಾಖಲಿಸಿದ್ದ ಪೊಲೀಸರು.

ಎಸ್.ಪಿ. ಹೇಳಿಕೆ ಬೆನ್ನಲ್ಲೇ ರಕ್ಷಣೆಗಾಗಿ ನೀಡಿದ್ದ ಗನ್ ಮ್ಯಾನ್ ನನ್ನು ಶಾಸಕರು ವಾಪಸ್ಸು ಕಳುಹಿಸಿದ್ದಾರೆ.

- Advertisement -

Related news

error: Content is protected !!