- Advertisement -
- Advertisement -
ನವದೆಹಲಿ: ವಿಮಾನ ಪ್ರಯಾಣದ ಸಮಯದಲ್ಲಿ ಮಾಸ್ಕ್ ಬಳಕೆ ಕಡ್ಡಾಯವಲ್ಲ. ಆದರೆ ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ನಡುವೆಯೂ ಪ್ರಯಾಣಿಕರು ಅವುಗಳನ್ನು ಬಳಸುವುದು ಉತ್ತಮ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಬುಧವಾರ ಹೇಳಿದೆ.

ಈ ಹಿಂದೆ ಫೇಸ್ ಕವರ್ ಗಳು ಕಡ್ಡಾಯವಾಗಿತ್ತು. ಪ್ರಯಾಣಕ್ಕೆ ನಿಗದಿಯಾಗಿರುವ ವಿಮಾನಗಳ ಸಂಸ್ಥೆಗಳಿಗೆ ಕಳಿಸಲಾಗಿರುವ ಪ್ರಕಟಣೆಯಲ್ಲಿ, ಮಾಸ್ಕ್ ಕಡ್ಡಾಯಗೊಳಿಸುವುದನ್ನು ಹಿಂಪಡೆಯುತ್ತಿರುವ ನಿರ್ಧಾರವನ್ನು COVID-19 ನಿರ್ವಹಣೆಯ ಪ್ರತಿಕ್ರಿಯೆಗೆ ಸರ್ಕಾರದ ಶ್ರೇಣೀಕೃತ ವಿಧಾನದ ನೀತಿಯ ಭಾಗವಾಗಿ ಕೈಗೊಳ್ಳಲಾಗಿದೆ. ಆದ್ದರಿಂದ ವಿಮಾನದ ಒಳಗಿನ ಪ್ರಕಟಣೆಯಲ್ಲಿ, ಪ್ರಯಾಣಿಕರು ತಮ್ಮ ಆಯ್ಕೆಯಿಂದ ಮಾಸ್ಕ್ ಧರಿಸುವುದು ಸೂಕ್ತ ಎಂಬುದಾಗಿ ಹೇಳಬೇಕೆಂದು ಸಚಿವಾಲಯ ತಿಳಿಸಿದೆ.

- Advertisement -








