Friday, June 19, 2026
spot_imgspot_img
spot_imgspot_img

ಸುಳ್ಯ: 12 ದಿನಗಳ ಹಿಂದೆ ಹೆಣ್ಣು ಮಗುವಿಗೆ ಜನ್ಮವಿತ್ತ ಬಾಣಂತಿ ಸಾವು

- Advertisement -
- Advertisement -

ಸುಳ್ಯ: ಹೆರಿಗೆಯಾದ 12ನೇ ದಿನಕ್ಕೆ ಅನಾರೋಗ್ಯಕ್ಕೆ ತುತ್ತಾಗಿ ಬಾಣಂತಿಯೊಬ್ಬರು ಸಾವನ್ನಪ್ಪಿದ ಘಟನೆ ಸುಳ್ಯ ಸಮೀಪ ನಡೆದಿದೆ.

ಸುಳ್ಯ ತಾಲೂಕು ಜಟ್ಟಿಪಳ್ಳದ ನಿವಾಸಿ ಲೀಲಾ ಎಂಬವರ ಪುತ್ರಿ ಗೀತಾ (30ವ.) ಸಾವನ್ನಪ್ಪಿದ ಬಾಣಂತಿ ಮಹಿಳೆ. ಈಕೆಯನ್ನು ಚೊಕ್ಕಾಡಿಯ ಜಗದೀಶ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಒಂದು ಗಂಡು ಮಗುವಿದ್ದು, ಎರಡನೇ ಮಗುವಿನ ಹೆರಿಗೆಗಾಗಿ ಅವರು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

12 ದಿನಗಳ ಹಿಂದೆ ಅವರು ಹೆಣ್ಣು ಮಗುವಿಗೆ ನೀಡಿದ್ದರು. ಬಳಿಕ ಅವರು ಮಗು ಸಮೇತ ತಾಯಿ ಮನೆಗೆ ಬಂದಿದ್ದರು. ನ. 20 ರಂದು ಬೆಳಿಗ್ಗೆ ತೀವ್ರ ಅನಾರೋಗ್ಯಕ್ಕೆ ಒಳಗಾದ ಅವರನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ರಾತ್ರಿ 8.30 ರ ವೇಳೆಗೆ ಅವರು ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

- Advertisement -

Related news

error: Content is protected !!