Thursday, June 11, 2026
spot_imgspot_img
spot_imgspot_img

“ಸ್ಪೈಸಿ” ಶುಭಾರಂಭ

- Advertisement -
- Advertisement -

ಪುತ್ತೂರು: ನಾನ್‌ವೆಜ್ ಹಾಗೂ ವೆಜ್ ಖಾದ್ಯಗಳ ಹೋಟೆಲ್ ಸ್ಪೈಸಿ ಫ್ಯಾಮಿಲಿ ರೆಸ್ಟೋರೆಂಟ್ ದರ್ಬೆ ರಿಲಯನ್ಸ್ ಡಿಜಿಟಲ್ ಸಮೀಪವಿರುವ ಫೋರಂ ಹೈಟ್ಸ್ ಬಿಲ್ಡಿಂಗ್‌ನಲ್ಲಿ ಸೆ.೧೪ರಂದು ನೂತನ ಆಡಳಿತದೊಂದಿಗೆ ನವೀಕೃತಗೊಂಡು ಶುಭಾರಂಭಗೊಂಡಿತು.

ಅಸ್ಸಯ್ಯದ್ ಸಾದಾತ್ ತಂಙಳ್ ಕರ್‍ವೇಲು ದುವಾಶೀರ್ವಚನಗೈದು ಶುಭ ಹಾರೈಸಿದರು. ಕೊಂಬೆಟ್ಟು ಶ್ರೀ ರಾಮಕೃಷ್ಣ ಪ್ರೌಢ ಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು ಉದ್ಘಾಟಿಸಿದರು. ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಅರಿಯಡ್ಕ, ಪುತ್ತೂರು ಟ್ರೇಡರ್‍ಸ್‌ನ ಮಾಲಕ ಯೂಸುಫ್ ಮೈದಾನಿಮೂಲೆ ಮಾತನಾಡಿದರು.

ಇಂಪೀರಿಯ ಗ್ರೂಪ್ ವತಿಯಿಂದ ಈ ರೆಸ್ಟೋರೆಂಟ್ ಆರಂಭವಾಗುತ್ತಿದ್ದು, ಗ್ರಾಹಕರಿಗೆ ಅಭಿರುಚಿಗೆ ತಕ್ಕಂತೆ ವಿವಿಧ ಬಗೆಯ ವೆಜ್ ಹಾಗೂ ನಾನ್ ವೆಜ್ ಖಾದ್ಯಗಳು ಇಲ್ಲಿ ದೊರೆಯುತ್ತದೆ. ಸೆಪ್ಟೆಂಬರ್ 14 ರಿಂದ ಆಹಾರ ಪ್ರೀಯರಿಗೆ ವಿಶೇಷ ಆಫರ್ ಗಳನ್ನು ನೀಡಲಾಗಿದೆ.

ನಗರಸಭಾ ಮಾಜಿ ಸದಸ್ಯ ಅನ್ವರ್ ಖಾಸಿಂ, ಮೈದಾನಿಮೂಲೆ ಮಸೀದಿ ಕಾರ್ಯದರ್ಶಿ ಮಹಮ್ಮದ್, ಉದ್ಯಮಿ ಅಶ್ರಫ್ ಉಜಿರೋಡಿ, ಹೋಟೆಲ್ ಕಟ್ಟಡದ ಮಾಲೀಕ ಸುಲೈಮಾನ್ ಹಾಜಿ ಉಪಸ್ಥಿತರಿದ್ದರು. ಶಾಫಿ ಕಾಮಿಲ್ ಸಖಾಫಿ ಕೊಕ್ಕಡ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಬಡಗನ್ನೂರು, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಉದ್ಯಮಿ ಹಸನ್ ಹಾಜಿ ಯುನಿಟಿ, ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಸಿದ್ದಿಕ್ ಕೆ.ಎ, ನಗರಸಭಾ ಸದಸ್ಯ ರಿಯಾಝ್ ಆಗಮಿಸಿ ಶುಭ ಹಾರೈಸಿದರು. ಯುವ ಕಾಂಗ್ರೆಸ್ ಮುಖಂಡ ಹನೀಫ್ ಪುಣ್ಚತ್ತಾರು ಕಾರ್ಯಕ್ರಮ ನಿರೂಪಿಸಿದರು. ಹೋಟೆಲ್ ಮಾಲಕ ಮಹಮ್ಮದ್ ಶರೀಫ್, ಸಾಮಾಜಿಕ ಮುಂದಾಳು ಅಬ್ದುಲ್ಲ ಮೆಣಸಿನಕಾನ ಹಾಗೂ ಸಿಬ್ಬಂದಿಗಳು ಅತಿಥಿಗಳನ್ನು ಸತ್ಕರಿಸಿದರು.

- Advertisement -

Related news

error: Content is protected !!