




ಏಪ್ರಿಲ್ 2 ಗುರುವಾರ ಬೆಳಿಗ್ಗೆ 7 ಗಂಟೆಯಿಂದ ಬೆಳಗ್ಗಿನ ಪೂಜೆ, ಗಣಪತಿ ಹೋಮ, ಅಂಕುರಪೂಜೆ, ಮಧ್ಯಾಹ್ನ ಪೂಜೆ, ಸಂಹಾರ ತತ್ವಹೋಮ, ಸಂಹಾರ ತತ್ವ ಕಲಶ, ಶಯ್ಯಾ ಮಂಟಪದಲ್ಲಿ ಕುಂಭೇಶ ಕರ್ಕರಿ ಕಲಶ ಪೂಜೆ, ವಿದ್ಯೇಶ್ವರ ಕಲಶ ಪೂರಣೆ ಹಾಗೂ ನಿದ್ರಾ ಕಲಶ ಪೂರಣೆ, ಅಗ್ನಿ ಜನನ, ಬಿಂಬ ಶುದ್ದಿ ಕಲಶ ಪೂರಣೆ, ಶ್ರೀ ದೇವರಿಗೆ ಸಂಹಾರ ತತ್ವ ಕಲಶಾಭಿಷೇಕ, ಜೀವಕಲಶ ಪೂರಣೆ, ಜೀವೋದ್ವಾಸನ ಕ್ರಿಯೆಗಳು ನಡೆಯಲಿವೆ.
ಸಂಜೆ 5 ಗಂಟೆಯಿಂದ ಅಂಕುರಪೂಜೆ, ಸ್ವಸ್ತಿ ಪುಣ್ಯಾಹವಾಚನ, ವಾಸ್ತು ಪೂಜೆ, ಬಿಂಬ ಶುದ್ದಿ ಕಲಶಾಭಿಷೇಕ, ಶಿರಸ್ತತ್ವ ಹೋಮ, ಶಾಂತಿ ಹೋಮ, ಧ್ಯಾನಾಧಿವಾಸ ಕ್ರಿಯೆ, ಭದ್ರಕ ಮಂಡಲ ಪೂಜೆ, ಅಧಿವಾಸ ಹೋಮ, ಶಯ್ಯೆಯಲ್ಲಿ ರಾತ್ರಿ ಪೂಜೆ, ಅಧಿವಾಸ ಬಲಿ, ಶಕ್ತಿಪೂಜೆ, ರತ್ನನ್ಯಾಸ, ಪೀಠಾಧಿವಾಸ ಹಾಗೂ ಪ್ರಾಸಾದ ಅಧಿವಾಸ ಕಾರ್ಯಕ್ರಮಗಳು ಜರುಗಲಿವೆ.
ಇದರೊಂದಿಗೆ ಬೆಳಿಗ್ಗೆ 8.30ರಿಂದ 10.30ರವರೆಗೆ ಶ್ರೀ ಜ್ಯೇಷ್ಠರಾಜ ಭಜನಾ ಮಂಡಳಿ, ಚಿಪ್ಪಾರು ಹಾಗೂ ಶ್ರೀ ಸತ್ಯಸಾಯಿ ಸೇವಾ ಸಮಿತಿ, ಬಾಯಾರು ಇವರಿಂದ ಭಜನೆ ಕಾರ್ಯಕ್ರಮ ನಡೆಯಲಿದೆ.
ಬೆಳಿಗ್ಗೆ 9.30ರಿಂದ ರಂಜನ್ ವಗೆನಾಡು ಮತ್ತು ಬಳಗದವರಿಂದ ’ಭಕ್ತಿ ಸಂಗೀತ’, ಬೆಳಿಗ್ಗೆ 11.30ರಿಂದ ಶ್ರೀ ಮಛ್ಛೇಂದ್ರನಾಥ ಕನ್ಯಾನ ಮತ್ತು ಸಂಗಡಿಗರಿಂದ “ಸ್ಯಾಕ್ಸೋಫೋನ್ ಕಛೇರಿ” ನಡೆಯಲಿದೆ.
ಮಧ್ಯಾಹ್ನ 1.30ರಿಂದ ಭಾಗವತ ಶ್ರೀ ಕುರಿಯ ಗಣಪತಿ ಶಾಸ್ತ್ರಿಗಳ ನೇತೃತ್ವದಲ್ಲಿ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಲೆ ‘ಸಂಜಯ ರಾಯಭಾರ’ ನಡೆಯಲಿದೆ.
ಸಂಜೆ 4.30ರಿಂದ ಸುಧರ್ಮ ಸಭೆ ನಡೆಯಲಿದ್ದು, ಶ್ರೀ ಭೀಮನಕಟ್ಟೆ ಮಠದ ಪರಮಪೂಜ್ಯ ಶ್ರೀ ಶ್ರೀ ರಘುವರೇಂದ್ರ ತೀರ್ಥ ಶ್ರೀಪಾದರು, ಇವರಿಂದ ಆಶೀರ್ವಚನ ನೀಡಲಾಗುತ್ತದೆ. ಹಿರಿಯ ವೈದಿಕ ವಿದ್ವಾಂಸರಾದ ವೇದಮೂರ್ತಿ ಶ್ರೀ ಬೋಳಂತಕೋಡಿ ರಾಮಭಟ್ ಅವರು ದೀಪ ಪ್ರಜ್ವಲನೆ ನೆರವೇರಿಸಲಿದ್ದು, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಹರೀಶ್ ಇಂಜಾಡಿ ಅವರು ಸಭೆಯ ಅಧ್ಯಕ್ಷತೆ ವಹಿಸಲಿದ್ದಾರೆ ಧಾರ್ಮಿಕ ಉಪನ್ಯಾಸವನ್ನು ಹೊರನಾಡು ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿಗಳಾದ ಶ್ರೀ ರಾಮ ನಾರಾಯಣ ಜೋಷಿ ಇವರು ನೀಡಲಿದ್ದಾರೆ ಮತ್ತು ಇನ್ನಿತರ ಹಲವು ಗಣ್ಯರು ಈ ಸಭಾ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ 7 ಗಂಟೆಯಿಂದ ಕುಮಾರಿ ಸೂರ್ಯಗಾಯತ್ರಿ ಇವರಿಂದ “ಭಕ್ತಿಗಾನ ಸಂಭ್ರಮ” ನಡೆಯಲಿದೆ.








