- Advertisement -
- Advertisement -
ನವದೆಹಲಿ: ದೇಶ ವಿದೇಶಗಳಲ್ಲಿ ತಲ್ಲಣ ಮೂಡಿಸಿದ, ಲಿವಿಂಗ್ ರಿಲೇಷನ್ಶಿಪ್ನಲ್ಲಿದ್ದ ಗೆಳತಿ ಶ್ರದ್ಧಾ ವಾಕರ್ನನ್ನು ಭೀಕರವಾಗಿ ಹತ್ಯೆ ಮಾಡಿದ್ದ ಅಫ್ತಾಬ್ ಅಮೀನ್ ಪೂನಾವಾಲ ಹತ್ಯೆಗೆ ಸೋಮವಾರ ಯತ್ನಿಸಲಾಗಿದೆ.
ಕತ್ತಿ ಹಿಡಿದುಬಂದ ಗುಂಪೊಂದು ಪೊಲೀಸ್ ವ್ಯಾನ್ ಮೇಲೆ ಏಕಾ-ಏಕಿ ದಾಳಿ ಮಾಡಿದೆ. ದೆಹಲಿಯ ರೋಹಿಣಿಯಲ್ಲಿರುವ ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆ ನಡೆಸಿ ಮರಳಿ ಜೈಲಿಗೆ ಕರೆದೊಯ್ಯುವಾಗ ದಾಳಿ ನಡೆದಿದೆ.
15 ಜನರ ಗುಂಪು ಕತ್ತಿ ಹಿಡಿದು ಏಕಾ-ಏಕಿ ದಾಳಿ ನಡೆಸಿದೆ. ಅಲ್ಲದೇ ಆ ಗುಂಪು ಅಫ್ತಾಬ್ನನ್ನೇ ಹುಡುಕುತ್ತಿತ್ತು. ಅದು ಬಲಪಂಥೀಯರ ಗುಂಪಿನಂತೆ ಕಂಡುಬಂದಿದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ. ತಕ್ಷಣ ಜಾಗೃತರಾದ ಪೊಲೀಸರು ದಾಳಿಯನ್ನು ಹತ್ತಿಕ್ಕಿ, ಅಫ್ತಾಬ್ನನ್ನು ರಕ್ಷಣೆ ಮಾಡಿದ್ದಾರೆ. ದಾಳಿಗೆ ಯತ್ನಿಸಿದ ಕೆಲವರು ಗಾಯಗೊಂಡಿದ್ದಾರೆ.
- Advertisement -