Sunday, June 14, 2026
spot_imgspot_img
spot_imgspot_img

ಕುಂಬಳೆ: ಅನೈತಿಕ ಅಡ್ಡೆಗೆ ಡಿವೈಎಫ್‌ಐ, ಸಿಪಿಎಂ ಕಾರ್ಯಕರ್ತರಿಂದ ದಾಳಿ..! ನಾಲ್ಕು ಯುವತಿಯರು ಕಿಕ್‌ಔಟ್‌

- Advertisement -
- Advertisement -

ಕುಂಬಳೆಯ ರೈಲು ನಿಲ್ದಾಣ ರಸ್ತೆ ಬದಿಯಲ್ಲಿ ಕಾರ್ಯಾಚರಿಸುತ್ತಿದ್ದ ಅನೈತಿಕ ಅಡ್ಡೆಗೆ ಡಿವೈಎಫ್‌ಐ ಹಾಗೂ ಸಿಪಿಎಂ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಕಾಂಪ್ಲೆಕ್ಸ್‌ ಒಂದರಲ್ಲಿ ವೇಶ್ಯಾವಾಟಿಕೆ ಅಡ್ಡೆ ನಡೆಯುತ್ತಿತ್ತು ಎಂದು ಆರೋಪಿಸಿ ದಾಳಿ ನಡೆಸಲಾಗಿದೆ.

ಮೂರು ಅಂತಸ್ತಿನ ಕಟ್ಟಡದ ಮೂರನೇ ಅಂತಸ್ತಿನಲ್ಲಿ ಕಾರ್ಯಾಚರಿಸುತ್ತಿದ್ದ ಅನೈತಿಕ ಚಟುವಟಿಕೆ ಕೇ೦ದ್ರದಿ೦ದ ನಾಲ್ಕು ಯುವತಿಯರನ್ನು ಡಿವೈಎಫ್‌ಐ ಕಾರ್ಯಕರ್ತರು ಹೊಡೆದೋಡಿಸಿದ್ದಾರೆ. ಸುಮಾರು 25ರಷ್ಟು ಮಂದಿ ಸೇರಿ ಈ ಅನೈತಿಕ ಚಟುವಟಿಕೆ ಕೇಂದ್ರವನ್ನು ಹಾನಿಗೊಳಿಸಿದ್ದಾರೆ.

ಕಟ್ಟಡದ ಕಿಟಕಿಗಳು, ಬಾಗಿಲುಗಳು, ವಿದ್ಯುತ್ ಉಪಕರಣಗಳು, ಕುರ್ಚಿ, ಮೇಜು, ಮಂಚ ಹೀಗೆ ಅನೇಕ ಸೊತ್ತುಗಳನ್ನು ಧ್ವಂಸಗೊಳಿಸಿದ್ದಾರೆ.

- Advertisement -

Related news

error: Content is protected !!