Monday, June 8, 2026
spot_imgspot_img
spot_imgspot_img

ಕಾರ್ಕಳ: ಸೆಕ್ಯೂರಿಟಿ ಗಾರ್ಡ್‌ಗೆ ಪಿಸ್ತೂಲ್‌ ತೋರಿಸಿ ಬೆದರಿಸಿ ಜ್ಯುವೆಲ್ಲರ್ಸ್‌ನಲ್ಲಿ ಕಳ್ಳತನ

- Advertisement -
- Advertisement -

ಕಾರ್ಕಳ: ಜ್ಯುವೆಲ್ಲರ್ಸ್ ಅಂಗಡಿಯೊಂದರ ಬೀಗ ಮುರಿದು ಒಳನುಗ್ಗಿದ ಕಳ್ಳರು ಬೆಲೆಬಾಳುವ ಬೆಳ್ಳಿ ವಸ್ತುಗಳ ಕಳ್ಳತನ ನಡೆಸಿದ ಘಟನೆ ಕಾರ್ಕಳ ನಿಟ್ಟೆಯಲ್ಲಿ ತಡರಾತ್ರಿ ನಡೆದಿದೆ.

ಅಖಿಲೇಶ್ ಮಾಲೀಕತ್ವದ ಆರಾಧ್ಯ ಜ್ಯುವೆಲ್ಲರ್ಸ್‌‌ಗೆ ತಡರಾತ್ರಿ 2 ಗಂಟೆಗೆ ಸುಮಾರಿಗೆ ನುಗ್ಗಿ ಕೃತ್ಯ ನಡೆಸಿದ್ದಾರೆ. ಕಳ್ಳರು ಟಿಪ್ಪರ್ ಅಡ್ಡ ಇಟ್ಟು ಅನಂತರ, ಯಾವುದೇ ರೀತಿಯಲ್ಲಿ ಗುರುತು ಸಿಗದ ಹಾಗೆ, ಮುಖಕ್ಕೆ ಮುಸುಕು ಹಾಕಿಕೊಂಡು, ಅಂಗಡಿಯ ಬೀಗ ಒಡೆದು ಒಳಗೆ ನುಗ್ಗಿ ಕಳವು‌ ಕೃತ್ಯ ಎಸಗಿದ್ದಾರೆ.

ಕೃತ್ಯದ ಬಗ್ಗೆ ಅನುಮಾನಗೊಂಡ ಸ್ಥಳೀಯ ಅಂಗಡಿಯ ಸೆಕ್ಯೂರಿಟಿ ಗಾರ್ಡ್ ಘಟನಾ‌ ಸ್ಥಳದತ್ತ ಹೋದಾಗ ದುಷ್ಟರ್ಮಿಗಳು ಪಿಸ್ತೂಲ್ ತೋರಿಸಿ, ಬೆದರಿಸಿದ್ದಾರೆಂಬ ಮಾಹಿತಿ ಲಭಿಸಿದೆ.

ಘಟನಾ ಸ್ಥಳಕ್ಕೆ ಗ್ರಾಮಾಂತರ ಎಸ್ ಐ ತೇಜಸ್ವಿ ಹಾಗೂ ಸಿಬ್ಬಂದಿಗಳು ತೆರಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಕೇಸು ದಾಖಲಾಗಿದೆ.

- Advertisement -

Related news

error: Content is protected !!