Monday, June 30, 2025
spot_imgspot_img
spot_imgspot_img

ಮಲ್ಪೆ ಬೀಚ್‌ನಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುತ್ತಿದ್ದ ಬಾಲಕಿಯ ರಕ್ಷಣೆ

- Advertisement -
- Advertisement -

ಉಡುಪಿ: ಮಲ್ಪೆ ಬೀಚ್‌ ಪರಿಸರದಲ್ಲಿ ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗಿ ಹೋಗುತ್ತಿದ್ದ ಬಾಲಕಿಯನ್ನು ಸಾಹಸಿಕ ಕಾರ್ಯಾಚರಣೆಯಲ್ಲಿ ರಕ್ಷಿಸಲಾಗಿದೆ. ಚಿತ್ರದುರ್ಗ ಮೂಲದ ಮಾನಗಿ ಗ್ರಾಮದ ಐಶ್ವರ್ಯ( 16) ನೀರಿಗೆ ಬಿದ್ದ ಬಾಲಕಿ.

ಕುಟುಂಬದ ಇತರ ಸದಸ್ಯರೊಂದಿಗೆ ಬಂದಿದ್ದ ಐಶ್ವರ್ಯ ಸಮುದ್ರ ತೀರದ ಬಳಿ ನೀರಿನಲ್ಲಿ ಆಟವಾಡುತ್ತಿದ್ದಾಗ ಏಕಾಏಕಿ ಬಂದ ಬೃಹತ್ ಅಲೆಗೆ ಆಯತಪ್ಪಿ ಬಿದ್ದಿದ್ದಾಳೆ. ಹಿಂದೆ ತೆರಳುವ ತೆರೆಗಳ ರಭಸ ಆಕೆಯನ್ನೂ ಸೆಳೆದುಕೊಂಡು ಹೋಗಿದೆ. ಹೀಗಾಗಿ ಆಕೆ ನೀರಿನಲ್ಲಿ ಸಿಲುಕಿ ಮುಳುಗೇಳುವಂತಾದಳು.

ಆಗ ಅಲ್ಲೇ ಇದ್ದ ಲೈಫ್‌ ಗಾರ್ಡ್‌ ಮತ್ತು ಆಪತ್ಭಾಂದವ ಈಶ್ವರ್ ಮಲ್ಪೆ ಅವರು ಕೂಡಲೇ ಸಮುದ್ರಕ್ಕೆ ಜಿಗಿದು ಆಕೆಯನ್ನು ಮೇಲಕ್ಕೆಳೆದು ತಂದರು. ಪ್ರಥಮ ಚಿಕಿತ್ಸೆ ನೀಡಿ ನೇರವಾಗಿ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಉಪ್ಪು ನೀರು ಕುಡಿದ ಹಿನ್ನೆಲೆಯಲ್ಲಿ ಅಸ್ವಸ್ಥಳಾದ ಹುಡುಗಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಈಶ್ವರ ಮಲ್ಪೆ ಅವರ ಸಕಾಲಿಕ ಕಾರ್ಯಾಚರಣೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

- Advertisement -

Related news

error: Content is protected !!