Saturday, June 6, 2026
spot_imgspot_img
spot_imgspot_img

ನಾಲ್ಕು ವರ್ಷದ ಕಂದಮ್ಮನ ಮೇಲೆ ಲೈಂಗಿಕ ಕಿರುಕುಳ; ಆರೋಪಿಗೆ ಜೈಲು ಶಿಕ್ಷೆ

- Advertisement -
- Advertisement -

ಮಂಗಳೂರು: ನಾಲ್ಕು ವರ್ಷದ ಕಂದಮ್ಮನ ಮೇಲೆ ಲೈಂಗಿಕ ಹಲ್ಲೆ ನಡೆಸಿದ ಆರೋಪಿ ಮರೋಳಿ ನಿವಾಸಿ ವಿನೋದ್‌ (46)ಗೆ ಮಂಗಳೂರು ನ್ಯಾಯಾಲಯ 3 ವರ್ಷ ಜೈಲು ಹಾಗೂ 50,000 ರೂ ದಂಡ ವಿಧಿಸಿದೆ.

2017ರ ಮೇ ತಿಂಗಳಿನಲ್ಲಿ ಮಗುವಿನ ಹೆತ್ತವರು ಕೆಲಸಕ್ಕೆಂದು ಹೋಗುವಾಗ ಮಗುವನ್ನು ನೆರೆಮನೆಯಲ್ಲಿ ಬಿಟ್ಟು ಹೋಗಿರುತ್ತಾರೆ. ಅದೇ ಪರಿಸರದವನಾದ ಆರೋಪಿ ವಿನೋದ್‌ ಅಲ್ಲಿಂದ ಮಗುವನ್ನು ಆತನ ಮನೆಗೆ ಎತ್ತಿಕೊಂಡು ಹೋಗಿ ಲೈಂಗಿಕ ಹಲ್ಲೆ ನಡೆಸಿದ್ದು, ಮಗು ಕೂಗಿದಾಗ ನೆರೆಮನೆಯವರು ಓಡಿ ಬಂದಾಗ ಈ ಘಟನೆಯು ಬೆಳಕಿಗೆ ಬಂದಿದೆ. ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇನ್ಸ್​​ಪೆಕ್ಟರ್​ ರವಿ ನಾಯ್ಕ ನೇತೃತ್ವದ ತಂಡ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರ ವಿಶೇಷ ಸರಕಾರಿ ಅಭಿಯೋಜಕ ವೆಂಕಟರಮಣ ಸ್ವಾಮಿ ಸಿ. ಅವರು ವಾದಿಸಿದ್ದರು.

ಹೆಚ್ಚುವರಿ ವಿಚಾರಣೆ ನಡೆಸಿದ ಮಂಗಳೂರಿನ ಸತ್ರ ನ್ಯಾಯಾಲಯ ಮತ್ತು ಎಫ್ಟಿಎಸ್‌ಸಿ 2(ಪೋಕ್ಸೋ) ನ್ಯಾಯಾಧೀಶ ಕೆ.ಎಂ. ರಾಧಾಕೃಷ್ಣ ಅವರು ಆರೋಪಿ ತಪ್ಪಿತಸ್ಥನೆಂದು ತೀರ್ಮಾನಿಸಿ ಪೋಕ್ಸೋ ಕಲಂ 8ರಡಿ 3 ವರ್ಷ ಜೈಲು ಹಾಗೂ 50,000 ರೂ ದಂಡ ವಿಧಿಸಿದ್ದಾರೆ. ಆದರೆ ಆರೋಪಿಯು ದಂಡ ಪಾವತಿಸಲು ತಪ್ಪಿದಲ್ಲಿ, 4 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಮಂಗಳೂರು ನ್ಯಾಯಾಲಯ ತೀರ್ಪು ನೀಡಿದೆ.

- Advertisement -

Related news

error: Content is protected !!