Monday, July 27, 2026
spot_imgspot_img
spot_imgspot_img

**ದೀಪಿಕಾಗೆ ಎನ್ ಸಿ ಬಿ ಸಮನ್ಸ್ ಜಾರಿ **

- Advertisement -
- Advertisement -

ಮಾದಕ ದ್ರವ್ಯದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ಎನ್ ಸಿ ಬಿ ಮುಂದೆ ಸೆಪ್ಟೆಂಬರ್ 25ರಂದು ಖ್ಯಾತ ನಟಿ ದೀಪಿಕಾ ಪಡುಕೋಣೆ ಹಾಜರಾಗಲಿದ್ದಾರೆ. ಈ ಸಂಬಂಧ ಎನ್ ಸಿ ಬಿ ಸಮನ್ಸ್ ಜಾರಿ ಮಾಡಿದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

ದೀಪಿಕಾ ಅವರ ಜತೆಗೆ ನಟಿಯರಾದ ಸಾರಾ ಆಲಿ ಖಾನ್, ಶ್ರದ್ಧಾ ಕಪೂರ್ ಮತ್ತು ರಾಕೂಲ್ ಪ್ರೀತ್ ಸಿಂಗ್ ಅವರಿಗೂ ಕೂಡ ನೋಟಿಸ್ ಜಾರಿ ಮಾಡಲಾಗಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ. ಸೆಪ್ಟೆಂಬರ್ 24ರಿಂದ 26 ಮಧ್ಯೆ ಎಲ್ಲ ನಟಿಯರನ್ನು ವಿಚಾರಣೆಗೆ ಗುರಿಪಡಿಸಲು ನಿರ್ಧರಿಸಲಾಗಿದೆ.

ಪ್ಯಾಷನ್ ಡಿಸೈನರ್ ಸಿಮೋನ್ ಕಂಬಾಟ ಅವರಿಗೂ ಎನ್ ಸಿ ಬಿ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ. ಈ ಬೆಳವಣಿಗೆ ಬಾಲಿವುಡ್ ನಲ್ಲಿ ಭಾರೀ ಸಂಚಲನ ಮೂಡಿಸಿದೆ.

- Advertisement -

Related news

error: Content is protected !!