Friday, May 17, 2024
spot_imgspot_img
spot_imgspot_img

ಬಿಸಿಯೂಟ ಯೋಜನೆಯನ್ನು ಪಿಎಂ ಪೋಷಣ್ ಯೋಜನೆ ಎಂದು ಮರುನಾಮಕರಣ ಮಾಡಿದ ಕೇಂದ್ರ; ಏನಿದರ ವಿಶೇಷತೆ..?

- Advertisement -G L Acharya panikkar
- Advertisement -

ನವದೆಹಲಿ: ಮಿಡ್-ಡೇ ಮೀಲ್ ಸ್ಕೀಮ್ ಇನ್ಮುಂದೆ ಪಿಎಂ ಪೋಷಣ್ ಯೋಜನೆ ಎಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಶಾಲೆಗೆ ಹೋಗುವ ವಿದ್ಯಾರ್ಥಿಗಳಲ್ಲಿ ಇರುವ ಅಪೌಷ್ಟಿಕತೆಯನ್ನು ಪರಿಹರಿಸುವ ಬಗ್ಗೆ ಚರ್ಚಿಸಲಾಯ್ತು. ಇದನ್ನು ಪರಿಹರಿಸಲು ‘ಪ್ರಧಾನ ಮಂತ್ರಿ ಪೋಷಣ್ ಶಕ್ತಿ ನಿರ್ಮಾಣ’ ಯೋಜನೆಗೆ ಅನುಮೋದನೆ ನೀಡಲಾಯ್ತು.

ಮಿಡ್-ಡೇ ಮೀಲ್ ಸ್ಕೀಮ್ ವಿದ್ಯಾರ್ಥಿಗಳಿಗೆ ಬಿಸಿಯೂಟ ಒದಗಿಸಲಿದೆ. ಈ ಮಿಡ್​​ ಡೇ ಮೀಲ್​ ಸ್ಕೀಮ್​​ ಇನ್ಮುಂದೆ ಪಿಎಂ ಪೋಷಣ್ ಶಕ್ತಿ ನಿರ್ಮಾಣ ರಾಷ್ಟ್ರೀಯ ಯೋಜನೆ. ಮುಂದಿನ ಐದು ವರ್ಷ ಈ ಯೋಜನೆ ಮುಂದುವರಿಸಲಾಗುವುದು. ಅದಕ್ಕಾಗಿ ಕೇಂದ್ರ ಸರ್ಕಾರ ಒಟ್ಟು 1.3 ಲಕ್ಷ ಕೋಟಿಗೂ ಹೆಚ್ಚು ಹಣ ಮೀಸಲಿಟ್ಟಿದೆ ಎಂದರು ಮೋದಿ.

ಪಿಎಂ ಪೋಷಣ್ ಸ್ಕೀಮ್​​ ಮೂಲಕ 11.20 ಲಕ್ಷ ಶಾಲೆಗಳ 11.80 ಕೋಟಿ ಮಕ್ಕಳನ್ನು ತಲುಪುವ ಗುರಿ ಹೊಂದಿದೆ. 1-8ನೇ ತರಗತಿಯ ಎಲ್ಲಾ ವಿದ್ಯಾರ್ಥಿಗಳು ಈ ಯೋಜನೆಯ ಪ್ರಯೋಜನೆ ಆಗಲಿದೆ ಎಂದು ತಿಳಿಸಲಾಗಿದೆ.

driving
- Advertisement -

Related news

error: Content is protected !!