- Advertisement -
- Advertisement -
ಭಾರತೀಯ ವಾಯುಪಡೆಯ ರಫೇಲ್ ಯುದ್ಧವಿಮಾನದ ಪ್ರಥಮ ಮಹಿಳಾ ಪೈಲಟ್ ಆಗಿ ಫ್ಲೈಟ್ ಲೆಫ್ಟಿನೆಂಟ್ ಶಿವಾಂಗಿ ಸಿಂಗ್ ಆಯ್ಕೆಯಾಗಿದ್ದಾರೆ.

2017ರಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾದ ಶಿವಾಂಗಿ ಸಿಂಗ್ ಯುದ್ಧವಿಮಾನಗಳ ಹಾರಾಟ ಮತ್ತು ಸಮರ ಕೌಶಲ್ಯದಲ್ಲಿ ವಿಶೇಷ ಪರಿಣಿತಿ ಪಡೆದಿದ್ದಾರೆ. ಸದ್ಯ ಶಿವಾಂಗಿ ಸಿಂಗ್ ಹರಿಯಾಣದ ಅಂಬಾಲ ವಾಯುನೆಲೆಗೆ ಆಗಮಿಸಿದ್ದು, ಹೊಸ ರಫೇಲ್ ಜೆಟ್ ಹಾರಾಟದ ಬಗ್ಗೆ ಸಮಗ್ರ ತರಬೇತಿ ಪಡೆಯಲಿದ್ದಾರೆ.

ವಾರಣಾಸಿ ಮೂಲದ ಶಿವಾಂಗಿ ಸಿಂಗ್ ರಫೇಲ್ ಯುದ್ಧವಿಮಾನ ಹಾರಿಸುವ ದೇಶದ ಮೊದಲ ಮಹಿಳೆಯಾಗಲಿದ್ದಾರೆ.

- Advertisement -