Monday, June 15, 2026
spot_imgspot_img
spot_imgspot_img

ಮಂಗಳೂರು: ಆಟೋರಿಕ್ಷಾ ಕಳವು ಮಾಡಿದ್ದ ಆರೋಪಿಯ ಬಂಧನ

- Advertisement -
- Advertisement -

ಮಂಗಳೂರು: ಆಟೋ ರಿಕ್ಷಾ ಸಹಿತ ಆರೋಪಿಯನ್ನು ಮಂಜೇಶ್ವರ ಪೊಲೀಸರು ಮಂಗಳೂರಿನಲ್ಲಿ ಸೆರೆಹಿಡಿದಿದ್ದಾರೆ.

ಉಪ್ಪಳಪಾಡಿ ನಿವಾಸಿ ಅಬ್ದುಲ್ ಸಮದ್ (35) ಬಂಧಿತ ಆರೋಪಿ.ಉಪ್ಪಳ ಫ್ಲ್ಯಾಟ್‌ನ ನಿವಾಸಿ ಸಿ.ಎಂ. ಅಬ್ದುಲ್ಲ ಎಂಬವರು ರಿಕ್ಷಾ ಕಳೆದುಕೊಂಡ ವ್ಯಕ್ತಿ.

ಹಲವು ತಿಂಗಳ ಹಿಂದೆ ಆಟೋ ರಿಕ್ಷಾ ರಾತ್ರಿ ಕಳವಾದ ಬಗ್ಗೆ ಸಿ.ಎಂ. ಅಬ್ದುಲ್ಲ ನೀಡಿದ ದೂರಿನಂತೆ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಪೊಲೀಸರು ಮೊಬೈಲ್ ಟವರ್ ಮೂಲಕ ಲೊಕೇಶನ್ ಟ್ರೇಸ್ ಮಾಡಿದ್ದು, ಈ ವೇಳೆ ಅಬ್ದುಲ್ ಸಮದ್ ಮಂಗಳೂರಿನಲ್ಲಿರುವುದು ತಿಳಿದು ಬಂದಿದೆ. ಇದರಂತೆ ಎಸ್‌ಐ ನಿಖಿಲ್ ನೇತೃತ್ವದ ಪೊಲೀಸರು ಮಂಗಳೂರಿನಲ್ಲಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಆಟೋ ಸಹಿತ ಬಂಧಿಸಿದ್ದಾರೆ.

- Advertisement -

Related news

error: Content is protected !!