Tuesday, August 11, 2026
spot_imgspot_img
spot_imgspot_img

ಪುತ್ತೂರು ಗ್ರಾಮಾಂತರ ಪೊಲೀಸರ ಕಾರ್ಯಾಚರಣೆ; ಅಕ್ರಮ ಜುಗಾರಿ ಅಡ್ಡೆಗೆ ದಾಳಿ ನಡೆಸಿ 6 ಜನರ ಬಂಧನ

- Advertisement -
- Advertisement -

ಪುತ್ತೂರು: ಅಕ್ರಮ ಜುಗಾರಿ ಅಡ್ಡೆಗೆ ಪೊಲೀಸರು ದಾಳಿ ನಡೆಸಿ 6 ಜನ ಆರೋಪಿಗಳನ್ನು ವಶಪಡಿಸಿಕೊಂಡ ಘಟನೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಂಧಿತ ಆರೋಪಿಗಳನ್ನು ಲೋಕೇಶ್, ಅನಂತಾಡಿ, ಹೇಮನಾಥ ಆರ್ಲಪದವು, ಸಂತೋಷ ಕೌಡಿಚ್ಚಾರು, ಸದಾನಂದ ಅರಿಯಡ್ಕ, ಉಮೇಶ ನಿಡ್ನಳ್ಳಿ, ಸತೀಶ್ ಶೆಟ್ಟಿ ಸಾಲೆತ್ತೂರು ಎಂದು ಗುರುತಿಸಲಾಗಿದೆ.

ಪುತ್ತೂರು ತಾಲೂಕು ನಿಡ್ಪಳ್ಳಿ ಗ್ರಾಮದ ತಂಬುತ್ತಡ್ಕ ಗುಡ್ಡ ಸ್ಥಳದಲ್ಲಿ ಅಕ್ರಮವಾಗಿ ಜುಗಾರಿ ಆಟ ಆಡುತ್ತಿದ್ದ ಮಾಹಿತಿ ತಿಳಿದು ಪೊಲೀಸರು ದಾಳಿ ನಡೆಸಿ 6 ಜನ ಆರೋಪಿಗಳು ಮತ್ತು ರೂ 35,710/- ಹಣ ವಶಪಡಿಸಿಕೊಂಡಿದ್ದಾರೆ. ಕಾರ್ಯಚರಣೆಯಲ್ಲಿ ಪೊಲೀಸ್‌ ನಿರೀಕ್ಷರಾದ ಮಂಜುನಾಥ ಎಂ, ನಿರ್ದೇಶನದಂತೆ ಪಿಎಸ್‌ಐ ಶ್ರೀನಾಥ್ ರೆಡ್ಡಿ, ನೇತೃತ್ವದಲ್ಲಿ ದಾಳಿ ನಡೆದಿದೆ..

- Advertisement -

Related news

error: Content is protected !!