- Advertisement -
- Advertisement -



ಕಠ್ಮಂಡು: 40 ಮಂದಿ ಭಾರತೀಯ ಪ್ರಯಾಣಿಕರಿದ್ದ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿ ಬಿದ್ದ ಪರಿಣಾಮ 14 ಜನರು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡ ಘಟನೆ ನೇಪಾಳದ ತನಾಹುನ್ ಜಿಲ್ಲೆಯಲ್ಲಿ ನಡೆದಿದೆ.
ನೇಪಾಳದ ತನಾಹುನ್ ಜಿಲ್ಲೆಯ ಮರ್ಸ್ಯಾಂಗ್ಡಿ ನದಿಗೆ ಬಸ್ ಉರುಳಿದೆ. ಉತ್ತರಪ್ರದೇಶದ ಎಫ್‌ಟಿ 7623 ನಂಬರ್ ಪ್ಲೇಟ್ ಹೊಂದಿದ್ದ ಬಸ್ ನದಿಗೆ ಪಲ್ಟಿ ಹೊಡೆದಿದೆ. ತನಾಹುನ್ ಜಿಲ್ಲೆಯ ಡಿಎಸ್‌ಪಿ ದೀಪ್‌ಕುಮಾರ್ ರಾಯಾ ( ದೂರವಾಣಿಯ ಮೂಲಕ ದೃಢಪಡಿಸಿದ್ದಾರೆ.
40 ಭಾರತೀಯ ಪ್ರಯಾಣಿಕರಿದ್ದ ಬಸ್ ಪೋಖರಾದಿಂದ ಕಠ್ಮಂಡುವಿನಿಂದ ತೆರಳುತ್ತಿತ್ತು. ಆಗ ತನಾಹುನ್ ಜಿಲ್ಲೆಯ ಮರ್ಸ್ಯಾಂಗ್ಡಿ ನದಿಗೆ ಉರುಳಿದೆ. 14 ಜನರು ಸಾವನ್ನಪ್ಪಿದ್ದು, 16 ಮಂದಿ ಗಾಯಗೊಂಡಿದ್ದಾರೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ
ಅಪಘಾತ ಸ್ಥಳದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ. ಬಸ್ಸು ರಸ್ತೆಯಿಂದ ಸುಮಾರು 300 ಮೀಟರ್ ಉರುಳಿ ನದಿಗೆ ಬಿದ್ದಿದೆ..
- Advertisement -