Tuesday, June 9, 2026
spot_imgspot_img
spot_imgspot_img

ಚಲಿಸುತ್ತಿದ್ದ ಬಸ್‌ನಲ್ಲಿ ಗಲಾಟೆ; ಚರಂಡಿಗೆ ಬಿದ್ದು ಓರ್ವ ಸಾವು..!

- Advertisement -
- Advertisement -

ಚಲಿಸುತ್ತಿದ್ದ ಬಸ್‌ನಲ್ಲಿ ಇಬ್ಬರು ಕುಡುಕರ ನಡುವೆ ನಡೆದ ಗಲಾಟೆಯಲ್ಲಿ ಓರ್ವ ಕೆಳಗೆ ಬಿದ್ದು ಮೃತಪಟ್ಟ ಘಟನೆ ಬಾಗಲಕೋಟೆ ಮುಧೋಳ-ಕುಳಲಿ ನಡೆದಿದೆ.

ಮೃತಪಟ್ಟವರನ್ನು ಮುಧೋಳದ ಸೋರಗಾವಿ ಗ್ರಾಮದ ಪ್ರಹ್ಲಾದ್ ಮುರಿಗೆಪ್ಪ ಮಾದರ (38) ಎಂದು ಗುರುತಿಸಲಾಗಿದೆ.

ಮುಧೋಳ ಮೂಲಕ ಬನಹಟ್ಟಿಗೆ ಬಸ್ ಹೊರಟಿತ್ತು. ಈ ವೇಳೆ ಬಸ್‌ನಲ್ಲಿ ಇಬ್ಬರು ಕುಡುಕರು ಗಲಾಟೆ ಶುರು ಮಾಡಿದ್ದಾರೆ. ಬಳಿಕ ಓರ್ವ ಕುಡುಕ ಮತ್ತೋರ್ವನನ್ನು ಬಸ್ಸಿನಿಂದ ಹೊರಗೆ ತಳ್ಳಿದ್ದಾನೆ. ಈ ಸಂದರ್ಭ ಚರಂಡಿಗೆ ಬಿದ್ದ ಪ್ರಹ್ಲಾದ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಬಳಿಕ ಜೆಸಿಬಿ ಬಳಸಿ ಶವವನ್ನು ಹೊರಗೆ ತೆಗೆದಿದ್ದಾರೆ. ಆರೋಪಿ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.

- Advertisement -

Related news

error: Content is protected !!